

ಗಂಗಾವತಿ: ತಾಲೂಕಿನ ಕೇಸರಹಟ್ಟಿ ಮತ್ತು ಹೇರೂರು ಗ್ರಾಪಂ ಕಚೇರಿಗೆ ತಾಪಂ ಇಒ ರಾಮರೆಡ್ಡಿ ಪಾಟೀಲ್ ಶುಕ್ರವಾರ ಭೇಟಿ ನೀಡಿ, ವಿವಿಧ ಯೋಜನೆಗಳ ಪ್ರಗತಿ ಪರಿಶೀಲಿಸಿದರು.
ಪಂಚಾಯತ್‌ರಾಜ್ ಇಲಾಖೆಯಡಿ ಮಂಜೂರಾದ ಯೋಜನೆಗಳನ್ನು ಪರಿಶೀಲಿಸಿದರಲ್ಲದೇ, ಅನುಷ್ಠಾನ ಪ್ರಮಾಣದ ಬಗ್ಗೆ ಸಿಬ್ಬಂದಿಯಿಂದ ಮಾಹಿತಿ ಪಡೆದುಕೊಂಡರು. ನಂತರ ಕೂಸಿನ ಮನೆ, ಗ್ರಂಥಾಲಯ ಮತ್ತು ಹೆಚ್ಚುವರಿ ಅರಿವು ಕೇಂದ್ರಗಳಿಗೆ ತೆರಳಿ, ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು.
ಗ್ರಂಥಾಲಯಗಳಲ್ಲಿ ದಿನಪತ್ರಿಕೆ, ಕಂಪ್ಯೂಟರ್ ಸೌಲಭ್ಯ ಮತ್ತು ನಿಯತಕಾಲಿಕೆಗಳಿದ್ದು, ಸ್ಪರ್ಧಾತ್ಮಕ ಪುಸ್ತಕಗಳ ಒದಗಿಸಬೇಕು. ಗ್ರಂಥಾಲಯವನ್ನು ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವಂತೆ ಸಿಬ್ಬಂದಿಗೆ ಸೂಚಿಸಿದರು.
ನಂತರ ಸರ್ಕಾರಿ ಪ್ರೌಢ ಶಾಲೆಗೆ ತೆರಳಿ ಮಕ್ಕಳ ಬಿಸಿಯೂಟದ ಬಗ್ಗೆ ಮಾಹಿತಿ ಪಡೆದುಕೊಂಡು, ಗುಣಮಟ್ಟದ ಶಿಕ್ಷಣ ನೀಡುವಂತೆ ಶಿಕ್ಷಕರಿಗೆ ಸೂಚಿಸಿದರು. ತಾಲೂಕಿನ ಅರಳಹಳ್ಳಿಯ ಸ.ಹಿ.ಪ್ರಾ ಮತ್ತು ಪ್ರೌಢ ಶಾಲೆಗೆ ತೆರಳಿ ಅಲ್ಲಿನ ವ್ಯವಸ್ಥೆ ಪರಿಶೀಲಿಸಿದರು.
ತಾಪಂ ಇಒ ರಾಮರೆಡ್ಡಿ ಪಾಟೀಲ್ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನಗೊಳಿಸಬೇಕಿದ್ದು, ಕೂಸಿನ ಮನೆ, ಗ್ರಂಥಾಲಯಕ್ಕೆ ಸಿಬ್ಬಂದಿ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಬೇಕು. ಕೂಸಿನ ಮನೆ ನಿರಂತರ ತೆರದಿರಬೇಕಿದ್ದು, ಮಕ್ಕಳಿಗೆ ಪೌಷ್ಟಿಕ ಆಹಾರ ವಿತರಿಸುವಂತೆ ಒತ್ತಾಯಿಸಿದರು.
ಪಿಡಿಒಗಳಾದ ರವಿಶಾಸಿ, ಶಂಶೀರ್‌ಅಲಿ, ಕಾರ್ಯದರ್ಶಿ ಲಕ್ಷ್ಮೀದೇವಿ, ಸಾಮಾಜಿಕ ಪರಿಶೋಧನೆ ವ್ಯವಸ್ಥಪಕ ವೀರನಗೌಡ, ಐಇಸಿ ಸಂಯೋಜಕ ಬಾಳಪ್ಪ ತಾಳಕೇರಿ, ಸಹಾಯಕರಾದ ಶರಣಯ್ಯಸ್ವಾಮಿ, ಶರಣಪ್ಪ, ಪ್ರಶಾಂತ ಇತರರಿದ್ದರು.