ಕಸ ವಿಲೇವಾರಿ ಸಿಬ್ಬಂದಿಗೆ ಸಕಾಲದಲ್ಲಿ ಹಣ ಪಾವತಿಸಿ

progress review meeting
ಗಂಗಾವತಿ ತಾಪಂ ಮಂಥನ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ತಾಪಂ ಇಒ ರಾಮರೆಡ್ಡಿ ಪಾಟೀಲ್ ಮಾತನಾಡಿದರು. ಸಂಜೀವಿನಿ ಯೋಜನೆ ಜಿಲ್ಲಾ ವ್ಯವಸ್ಥಾಪಕ ಯಂಕೋಬ, ಎಸ್‌ಬಿಐ ಬ್ಯಾಂಕ್ ಆರ್ಥಿಕ ಸಾಕ್ಷರತಾ ಸಲಹೆಗಾರ ಟಿ.ಆಂಜನೇಯ ಇತರರಿದ್ದರು.
Published on

ಗಂಗಾವತಿ: ಸ್ವಸಹಾಯ ಸಂಘದ ಸದಸ್ಯರ ಕುಟುಂಬಗಳಿಗೆ ಕೇಂದ್ರ ಪುರಸ್ಕೃತ ವಿಮೆ ಯೋಜನೆ ತಲುಪಿಸಬೇಕಿದ್ದು, ಕಡ್ಡಾಯ ವಿಮೆಗೆ ಆದ್ಯತೆ ನೀಡಬೇಕು ಎಂದು ತಾಪಂ ಇಒ ರಾಮರೆಡ್ಡಿ ಪಾಟೀಲ್ ಹೇಳಿದರು.

ನಗರದ ತಾಪಂ ಮಂಥನ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

ಪ್ರಧಾನ ಮಂತ್ರಿ ಜೀವನ್ ಜ್ಯೋತಿ, ಪ್ರಧಾನ ಮಂತ್ರಿ ಸುರಕ್ಷಾ ವಿಮೆ ಯೋಜನೆ ಅನುಷ್ಠಾಕ್ಕೆ ಒಕ್ಕೂಟದ ಸಿಬ್ಬಂದಿ ಆದ್ಯತೆ ನೀಡಬೇಕು. ಗ್ರಾಮೀಣ ಭಾಗದ ಕುಟುಂಬಗಳಿಗೆ ಸರ್ಕಾರದ ವಿಮೆ ಯೋಜನೆ ತಲುಪಿಸುವ ಅಗತ್ಯವಿದೆ. ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆಯಡಿ ಗ್ರಾಪಂ ಮಹಿಳಾ ಒಕ್ಕೂಟದ ಕೆಲಸ ಮಾಡುವ ವಿವಿಧ ಘಟಕಗಳ ಸದಸ್ಯರು ವಿಮೆ ಮಾಡಿಸಲು ಶ್ರಮಿಸಬೇಕು.

ಸಂಜೀವಿನಿ ಯೋಜನೆಯಡಿ ದೊರೆಯುವ ಸಾಲ-ಸೌಲಭ್ಯ, ಸಮುದಾಯ ಬಂಡವಾಳ ನಿಧಿ ಸೇರಿ ಇತರೆ ಸರ್ಕಾರಿ ಯೋಜನೆಗಳನ್ನು ಅರ್ಹ ಕುಟುಂಬಗಳಿಗೆ ತಲುಪಿಸಬೇಕು. ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕೆಲಸ ನಿರ್ವಹಿಸುತ್ತಿರುವ ಸ್ವಸಹಾಯ ಸಂಘದ ಮಹಿಳಾ ವಾಹನ ಚಾಲಕರು, ಕಸ ವಿಲೇವಾರಿ ಮಾಡುವ ಮಹಿಳಾ ಸಿಬ್ಬಂದಿಗೆ ಸಕಾಲದಲ್ಲಿ ಗೌರವಧನ ಪಾವತಿಸುವಂತೆ ಸೂಚಿಸಿದರು.

ಸಭೆಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ, ಬಳಕೆದಾರರ ಕರವಸೂಲಿ, ಎನ್‌ಆರ್‌ಎಲ್‌ಎಂ ಶೆಡ್ ನಿರ್ಮಾಣ, ಪ್ರಧಾನಮಂತ್ರಿ ವನಧನ ವಿಕಾಸ ಯೋಜನೆ, ಪಂಚಾಯತ್ ರಾಜ್ ಸಂಸ್ಥೆ ಸಮುದಾಯ ಆಧಾರಿತ ಒಗ್ಗೂಡಿಸುವ ಯೋಜನೆ, ಬ್ಯಾಂಕ್ ಲಿಂಕೇಜ್, ನಲ್ ಜಲ್ ಮಿತ್ರ, ಮಾಸಿಕ ಸಂತೆ, ಕೆಎಂಎ್ ಮಹಿಳಾ ಸಂಘಗಳು, ನಮೋ ಡ್ರೋನ್, ದೀದಿ ಯೋಜನೆಗಳ ಕುರಿತು ಮಾಹಿತಿ ನೀಡಲಾಯಿತು. ಲಿಂಗತ್ವ ಸಮಾನತೆ, ಮಹಿಳಾ ಸಂಘಗಳ ರಚನೆ, ಪಂಚಾಯತ್ ರಾಜ್ ಸಂಸ್ಥೆಗಳ ಸಮುದಾಯ ಆಧಾರಿತ ಯೋಜನೆ ಕುರಿತು ಸಂಜೀವಿನಿ ಯೋಜನೆ ಜಿಲ್ಲಾ ವ್ಯವಸ್ಥಾಪಕ ಯಂಕೋಬ ಮಾಹಿತಿ ನೀಡಿದರು.

ಯೋಜನೆ ವ್ಯವಸ್ಥಾಪಕ ಮಲ್ಲಿಕಾರ್ಜುನ, ಕಷಿ ತಾಲೂಕು ವ್ಯವಸ್ಥಾಪಕ ಮುಡ್ಡಾಣೇಶ, ತಾಲೂಕು ಸಂಯೋಜಕಿ ಜ್ಯೋತಿ, ಡಿಇಒ ಮಂಜುನಾಥ ಜೋಗದ, ವಿಷಯ ನಿರ್ವಾಹಕರಾದ ಕೀರ್ತಿ, ದುರುಗಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net