ಶಿಕ್ಷಣದಿಂದ ಸ್ವಾಭಿಮಾನದ ಬದುಕು

felicitation of achievers
ಗಂಗಾವತಿ ನೀಲಕಂಠೇಶ್ವರ ವೃತ್ತದ ಬಳಿಯ ಶ್ರೀಕೃಷ್ಣ ಸಭಾಂಗಣದಲ್ಲಿ ದಲಿತ ಸೇನೆಯಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಜಿ ಶಾಸಕ ಪರಣ್ಣ ಮುನವಳ್ಳಿ ಬುಧವಾರ ಉದ್ಘಾಟಿಸಿದರು. ದಲಿತ ಸಂಘಟನೆ ಪದಾಧಿಕಾರಿಗಳಾದ ಯು. ಲಕ್ಷ್ಮಣ, ಸಣ್ಣ ಹನುಮಂತಪ್ಪ, ಗಂಗಣ್ಣ ಸಿದ್ದಾಪುರ, ಹುಲುಗಪ್ಪ ಕೊಜ್ಜಿ ಇತರರಿದ್ದರು.
Published on

ಗಂಗಾವತಿ: ಶಿಕ್ಷಣದ ಮೂಲಕ ಉತ್ತಮ ಸಾಧನೆ ಮಾಡಬೇಕಿದ್ದು, ಅಂಬೇಡ್ಕರ್ ಆದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ನಗರದ ನೀಲಕಂಠೇಶ್ವರ ವೃತ್ತದ ಬಳಿಯ ಶ್ರೀಕೃಷ್ಣ ಸಭಾಂಗಣದಲ್ಲಿ ದಲಿತ ಸೇನೆಯಿಂದ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಣದಿಂದ ಎಲ್ಲವನ್ನೂ ಪಡೆಯಬಹುದಾಗಿದ್ದು, ಸ್ವಾಭಿಮಾನದಿಂದ ಬದುಕಲು ಸಾಧ್ಯ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಆಂಬೇಡ್ಕರ್ ನಿತ್ಯ ಸ್ಮರಣೀಯರಾಗಿದ್ದು, ಅವರ ಆದರ್ಶಗಳನ್ನು ನಡೆ, ನುಡಿಯಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಮಾಜಿ ಉಪಪ್ರಧಾನಿ ಬಾಬೂ ಜಗಜೀವನರಾಮ್ ಜಯಂತ್ಯುತ್ಸವ ನಿಮಿತ್ತ ಹಮ್ಮಿಕೊಳ್ಳಲಾಗಿತ್ತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಮತ್ತು ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ದಲಿತ ಸಂಘಟನೆ ಪದಾಧಿಕಾರಿಗಳಾದ ಯು. ಲಕ್ಷ್ಮಣ, ಸಣ್ಣ ಹನುಮಂತಪ್ಪ, ಗಂಗಣ್ಣ ಸಿದ್ದಾಪುರ, ಹುಲುಗಪ್ಪ ಕೊಜ್ಜಿ, ದುರುಗೇಶ ಅಕ್ಕಿರೊಟ್ಟಿ, ಶರಣು ಸಿದ್ದಾಪುರ, ಕೃಷ್ಣಾ ಅಕ್ಕಿರೊಟ್ಟಿ, ಯು. ಶ್ರೀನಿವಾಸ್, ಯಮನೂರಪ್ಪ ಗೋನಾಳ್, ದುರುಗಪ್ಪ, ಹನುಮಂತಪ್ಪ ಹೊಸಪೇಟೆ, ದುರುಗಪ್ಪ ದೊಡ್ಮನಿ, ರಾಘವೇಂದ್ರ, ಯೋಗೇಶ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net