

ಗಂಗಾವತಿ: ನೇಗಿಲ ಯೋಗಿ ಸಿದ್ದಾಪುರ ಹಿರೇಮಠದ ವೀರಪ್ಪಯ್ಯ ತಾತಾನವರ ಎರಡನೇ ಆವೃತ್ತಿಯ ಪುಸ್ತಕ ಬಿಡುಗಡೆ ಜು.5ರಂದು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಾಟಕಕಾರ ಹಾಗೂ ಲೇಖಕ ಎಸ್.ವಿ.ಪಾಟೀಲ್ ಗುಂಡೂರು ಹೇಳಿದರು.
ನಗರದ ಹಿರೇಜಂತಕಲ್ ಕನ್ಯಕಾಪರಮೇಶ್ವರಿ ದೇವಾಲಯದ ಸಭಾಂಗಣದಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಗುರುವಾರ ಬಿಡುಗಡೆಗೊಳಿಸಿ ಮಾತನಾಡಿದರು.
ನಗರದ ಸುಶಮೀಂದ್ರ ಗುರುಕುಲ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಉತ್ತಂಗಿ ಶ್ರೀಮಠದ ಶ್ರೀ ಸೋಮಶಂಕರ ಸ್ವಾಮೀಜಿ, ನಂದಿಪುರ ಪುಣ್ಯಕ್ಷೇತ್ರದ ಡಾ.ಮಹೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಲಿದ್ದಾರೆ.
ಮಾಜಿ ಸಂಸದ ಎಚ್.ಜಿ.ರಾಮುಲು ಉದ್ಘಾಟಿಸಲಿದ್ದು, ಸಂಶೋಧಕ ಡಾ.ಶರಣಬಸಪ್ಪ ಕೋಲ್ಕಾರ್ ಅಧ್ಯಕ್ಷತೆವಹಿಸಲಿದ್ದಾರೆ. ಸಿದ್ದಾಪುರ ಹಿರೇಮಠದ ಶಿವಕುಮಾರ ಸ್ವಾಮಿ, ಬಳ್ಳಾರಿ ಶ್ರೀಕಷ್ಣದೇವರಾಯ ವಿವಿ ಕುಲಸಚಿವ ಎಸ್.ಎನ್.ರುದ್ರೇಶ, ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಪ್ರಭಾರ ಅಧ್ಯಕ್ಷ ಎನ್.ಎಸ್ ಪಾಟೀಲ್, ಸಾಹಿತಿ ಎನ್.ಶರಣಪ್ಪ ಮೆಟ್ರಿ, ವಕೀಲ ವೈಜನಾಥಸ್ವಾಮಿ ಹಿರೇಮಠ, ಅಣ್ಣ ಹಜಾರೆ ೌಂಡಷನ್ ಬಳ್ಳಾರಿ ಘಟಕದ ಅಧ್ಯಕ್ಷ ರಾಜಶೇಖರ ಮುಲಾಲಿ, ಮುಖಂಡರಾದ ಬಸವರಾಜ ದೊಡ್ಡನಗೌಡ ಹಳೇಮನಿ, ರಾಮಮೂರ್ತಿ ನವಲಿ, ನಾಗಭೂಷಣ ಅರಳಿ, ಸಿ.ಮಹಾಲಕ್ಷ್ಮೀ, ರಮೇಶ ನೇತ್ರ, ಅಂತಾರಾಷ್ಟ್ರೀಯ ಹಾಸ್ಯ ಕಲಾವಿದ ಕೋಗಳಿ ಕೊಟ್ರೇಶರಿಂದ ಹಾಸ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.