ಕ್ರೀಡಾಕೂಟ ಆಯೋಜನೆ ಅಚ್ಚುಕಟ್ಟಾಗಿರಲಿ, ಬಿಇಒ ಎಚ್.ಬಿ.ನಟೇಶ ಸೂಚನೆ

Teacher, Preparatory Meeting
ಗಂಗಾವತಿ ವಿದ್ಯಾಗಿರಿಯ ಎಂಎನ್‌ಎಂ ಪ್ರೌಢ ಶಾಲೆಯಲ್ಲಿ ಪ್ರಸಕ್ತ ಸಾಲಿನ ಶಾಲೆಗಳ ಕ್ರೀಡಾಕೂಟ ನಿಮಿತ್ತ ದೈಹಿಕ ಶಿಕ್ಷಣ ಶಿಕ್ಷಕರಿಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನು ಬಿಇಒ ಎಚ್.ಬಿ.ನಟೇಶ ಗುರುವಾರ ಉದ್ಘಾಟಿಸಿದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಸರಸ್ವತಿ ಜೂಡಿ, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಹನುಮಂತಪ್ಪ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಶಿವಕಾಂತ ತಳವಾರ ಇತರರಿದ್ದರು.
Published on

ಗಂಗಾವತಿ: ಪ್ರಸಕ್ತ ಸಾಲಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಕ್ರೀಡಾಕೂಟವನ್ನು ಅಚ್ಚುಕಟ್ಟಾಗಿ ಆಸಕ್ತ ಶಾಲೆಗಳ ನಿರ್ವಹಣೆಯಲ್ಲಿ ಆಯೋಜಿಸಬೇಕಿದ್ದು, ಇಲಾಖೆ ಕ್ರೀಡಾ ನಿಯಮಾವಳಿ ಪಾಲಿಸುವಂತೆ ಬಿಇಒ ಎಚ್.ಬಿ.ನಟೇಶ ಹೇಳಿದರು.

ನಗರದ ವಿದ್ಯಾಗಿರಿಯ ಎಂಎನ್‌ಎಂ ಪ್ರೌಢ ಶಾಲೆಯಲ್ಲಿ ಪ್ರಸಕ್ತ ಸಾಲಿನ ಶಾಲೆಗಳ ಕ್ರೀಡಾಕೂಟ ನಿಮಿತ್ತ ದೈಹಿಕ ಶಿಕ್ಷಣ ಶಿಕ್ಷಕರಿಗೆ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕಿನಲ್ಲಿ ಕ್ರೀಡಾಕೂಟ ಆಯೋಜಿಸಬೇಕಿದ್ದು, ವಲಯ, ಹೋಬಳಿ ಮತ್ತು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯಾ ಶಾಲೆಗಳ ಪ್ರಾಯೋಜಕತ್ವವಹಿಸಲು ಕ್ರಮ ಕೈಗೊಳ್ಳಬೇಕು. ಇಲಾಖೆ ನಿಯಾಮವಳಿಯಂತೆ ಕ್ರೀಡಾಕೂಟ ಆಯೋಜಿಸಬೇಕಿದ್ದು, ಕ್ರೀಡಾಪಟುಗಳ ಭಾಗವಹಿಸುವಿಕೆಗೂ ನಿಯಮ ಪಾಲಿಸಬೇಕು. ಕ್ರೀಡಾ ಉತ್ತೇಜನ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.

ಕ್ರೀಡಾಕೂಟ ಆಯೋಜನೆ, ಇಲಾಖೆ ನಿಯಮಾವಳಿ ಪಾಲನೆ, ಕ್ರೀಡಾ ಪ್ರೋತ್ಸಾಹ, 14 ಮತ್ತು 17 ವರ್ಷದೊಳಗಿನ ಬಾಲಕ, ಬಾಲಕಿಯರ ಕ್ರೀಡಾಕೂಟ ಕುರಿತು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕಿ ಸರಸ್ವತಿ ಜೂಡಿ ಮಾಹಿತಿ ನೀಡಿದರು.

ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್, ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಹನುಮಂತಪ್ಪ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಶಿವಕಾಂತ ತಳವಾರ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಬಸವರಾಜ, ಶ್ರೀಕಾಂತ, ಬಸವರಾಜ ವೆಂಕಟಗಿರಿ, ಯಂಕಪ್ಪ ತಳವಾರ್, ಟಿ.ನಾಗರಾಜ್, ವಿಠ್ಠಲ್ ಜೀರಗಾಳ, ರವಿನಾಯಕ, ಜಯಶ್ರೀ, ಪ್ರಾಥಮಿಕ ಮತ್ತು ಪ್ರೌಢ ಶಾಲೆಯ 70 ದೈಹಿಕ ಶಿಕ್ಷಣ ಶಿಕ್ಷಕರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net