ಉಪಾಧ್ಯಾಯರ ಆದರ್ಶಗಳು ಅಗತ್ಯವಿದೆ; ಶಾಸಕ ಪರಣ್ಣ ಮುನವಳ್ಳಿ ಅಭಿಮತ

25092021 Gangavati BJP Deendayal Upadhyaya Jayantyutsava
Published on

ದೀನದಯಾಳರ ಜಯಂತ್ಯುತ್ಸವ

ಗಂಗಾವತಿ: ತ್ಯಾಗದ ಮೂಲಕ ಬಿಜೆಪಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ದೊರಕಿಸಿಕೊಟ್ಟ ಪಂ.ದೀನದಯಾಳ್ ಉಪಾಧ್ಯಯರು ಆದರ್ಶಗಳು ರಾಜಕೀಯ ಜೀವನದಲ್ಲಿ ಅಗತ್ಯವಿದೆ ಎಂದು ಶಾಸಕ ಪರಣ್ಣಮುನವಳ್ಳಿ ಹೇಳಿದರು.

ಬಂಡಿ ಬಸಪ್ಪ ಕ್ಯಾಂಪ್ ಬಸವೇಶ್ವರ ದೇವಾಲಯದ ಬಳಿ ಬಿಜೆಪಿ ಗ್ರಾಮೀಣ ಘಟಕದಿಂದ ಶನಿವಾರ ಆಯೋಜಿಸಿದ್ದ ಪಂ.ದೀನದಯಾಳ್ ಉಪಾಧ್ಯಾಯರ 105ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಪರೋಪಕಾರಿ ಚಟುವಟಿಕೆಗಳ ಮೂಲಕ ಪಕ್ಷವನ್ನು ಉನ್ನತ ಮಟ್ಟಕ್ಕೇರಿಸಿದ ಕೀತಿ ಉಪಾಧ್ಯಾಯರಿಗೆ ಸಲ್ಲುತ್ತದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net