ಬರಹಗಾರರ ಮೊದಲ ಅಭಿವ್ಯಕ್ತಿ ಕಾವ್ಯ

Gangavathi woments writers
ಗಂಗಾವತಿ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ ಓದು ಹೊತ್ತಿಗೆ ಕಾರ್ಯಕ್ರಮದಲ್ಲಿ ಪ್ರಾಚಾರ್ಯೆ ಡಾ.ಮುಮ್ತಾಜ್ ಬೇಗಂ ಮಾತನಾಡಿದರು. ಸಂಘದ ಖಜಾಂಚಿ ಡಾ.ಸೋಮಕ್ಕ, ಲೇಖಕಿ ರುದ್ರಮ್ಮ ಹಾಸಿನಾಳ್, ಪ್ರಾಧ್ಯಾಪಕರಾದ ಪ್ರೊ.ಎಂ.ಜಗದೇವಿ ಕಲಶೆಟ್ಟಿ, ಡಾ.ಪಾ.ಗುಂಡಪ್ಪ ಇತರರಿದ್ದರು.
Published on

ಗಂಗಾವತಿ: ಹೆಣ್ಣಿಗೆ ಮನದಾಳದ ಸಂವೇದನೆ ವ್ಯಕ್ತಿಪಡಿಸಲು ಕಾವ್ಯ ವಿಭಾಗ ಪ್ರಮುಖ ಮಾಧ್ಯಮವಾಗಿದ್ದು, ಜಿಲ್ಲೆಯಲ್ಲಿ 140ಕ್ಕೂ ಹೆಚ್ಚು ಮಹಿಳೆಯರು ಕಾವ್ಯ ರಚನೆ ಪ್ರಕಾರದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯೆ ಡಾ.ಮುಮ್ತಾಜ್ ಬೇಗಂ ಹೇಳಿದರು.

ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಘಟಕದಿಂದ ಶನಿವಾರ ಹಮ್ಮಿಕೊಂಡಿದ್ದ ಓದು ಹೊತ್ತಿಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕಾವ್ಯ ಅಭಿವ್ಯಕ್ತಿ ಎನ್ನುವುದು ಹೆಣ್ಣುಗರಳು ಇದ್ದಂತೆ. ಕಾವ್ಯಕ್ಕೆ ಸಮಾಜವನ್ನು ಚಿಕಿತ್ಸಕ ದಷ್ಟಿಯಿಂದ ನೋಡುವ ಗುಣವಿದೆ. ಬಹುತೇಕ ಬರಹಗಾರರ ಮೊದಲ ಅಭಿವ್ಯಕ್ತಿ ಕಾವ್ಯವಾಗಿದೆ ಎಂದರು.

ಸಂಘದ ಖಜಾಂಚಿ ಡಾ.ಸೋಮಕ್ಕ ಪ್ರಾಸ್ತಾವಿಕ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಓದುವ ಅಭ್ಯಾಸ ಕಡಿಮೆಯಾಗಿದ್ದು, ಓದಿನ ಮೂಲಕ ಬದುಕನ್ನು ಕಟ್ಟಿಕೊಂಡವರು ಸಮಾಜದಲ್ಲಿ ಒಳ್ಳೆಯ ಚಿಂತಕರಾಗಿದ್ದಾರೆ. ಆದ್ದರಿಂದ ಸಾಹಿತ್ಯ ಓದಬೇಕು ಎಂದರು. ಲೇಖಕಿ ರುದ್ರಮ್ಮ ಹಾಸಿನಾಳ್ ಅವರ ಬಸವ ಬೆಳಕಿನಲ್ಲಿ ಕೃತಿ ಅವಲೋಕನ ಮಾಡಲಾಯಿತು.

ಪ್ರಾಧ್ಯಾಪಕರಾದ ಪ್ರೊ.ಎಂ.ಜಗದೇವಿ ಕಲಶೆಟ್ಟಿ, ಡಾ.ಪಾ.ಗುಂಡಪ್ಪ, ಡಾ.ಬಸವರಾಜ ಗೌಡನಭಾವಿ, ಡಾ.ಉಷಾರಾಣಿ, ಹುಲಿಗೆಮ್ಮ, ತಾಯಪ್ಪ ಮರ್ಚೆಡ್, ಸಂಘದ ಪ್ರತಿನಿಧಿಗಳಾದ ಎಚ್.ನಾಗರತ್ನಾ, ಶಿಲ್ಪಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net