ಎನ್‌ಇಪಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡಿ

gangavathi students protest
ಎನ್‌ಇಪಿ ಅಡಿ ಪರೀಕ್ಷೆ ಎದುರಿಸಿದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಿಸುವಂತೆ ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ಗಂಗಾವತಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು. ಕೇಂದ್ರ ಸಮಿತಿ ಸದಸ್ಯ ಅಮರೇಶ ಕಡಗದ, ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ್, ತಾಲೂಕಾಧ್ಯಕ್ಷ ನಾಗರಾಜ್, ಪದಾಧಿಕಾರಿಗಳಾದ ಶಿವಕುಮಾರ, ಸಮೀರ, ಮೌನೇಶ, ಪ್ರಶಾಂತ, ಆಶಾ, ಪವಿತ್ರಾ, ಹುಲಿಗೆಮ್ಮ ಇತರರಿದ್ದರು.
Published on

ಗಂಗಾವತಿ: ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಅಡಿ ಪರೀಕ್ಷೆ ಎದುರಿಸಿದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ವಿತರಿಸುವಂತೆ ಒತ್ತಾಯಿಸಿ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ನಗರದ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಗುರುವಾರ ಪದವಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್‌ಗೆ ಮನವಿ ಸಲ್ಲಿಸಿದರು.

ಸಮಿತಿ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ್ ಮಾತನಾಡಿ, 2020ಯಲ್ಲಿ ಎನ್‌ಇಪಿ ಜಾರಿಯಾಗಿದ್ದು, ಇದುವರೆಗೂ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಅಂಕಪಟ್ಟಿ ವಿತರಿಸಿಲ್ಲ. ರಾಜ್ಯದ 22ಕ್ಕೂ ಹೆಚ್ಚು ವಿವಿಗಳಲ್ಲಿ ಎನ್‌ಇಪಿ ಜಾರಿಯಲ್ಲಿದ್ದು, 51ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಂಕಪಟ್ಟಿಯಿಂದ ವಂಚಿತರಾಗಿದ್ದಾರೆ. ಇದರಿಂದ ಉನ್ನತ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದ್ದು, ವಿವಿಗಳಿಗೆ ಅಲೆದಾಡುವ ಸ್ಥಿತಿ ಬಂದಿದೆ. ಡಿಜಿ ಲಾಕರ್‌ನಲ್ಲಿ ಪಡೆಯುವಂತೆ ವಿವಿ ಅಧಿಕಾರಿಗಳು ಉಡಾೆ ಹೇಳಿಕೆ ನೀಡುತ್ತಿದ್ದು, ತಾಂತ್ರಿಕ ಸಮಸ್ಯೆಯಿಂದ ಡಿಜಿ ಲಾಕರ್ ತೆರೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿ ವೇತನ ಮತ್ತು ಹಾಸ್ಟೆಲ್ ಪ್ರವೇಶಕ್ಕೂ ಅಡ್ಡಿಯಾಗಿದೆ.

ಅನ್‌ಲೈನ್ ಜತೆಗೆ ಮುದ್ರಿತ ಅಂಕಪಟ್ಟಿ ನೀಡುವಂತೆ ವಿವಿಗಳಿಗೆ ರಾಜ್ಯಪಾಲರು 2022ರಲ್ಲಿ ಆದೇಶಿಸಿದ್ದರೂ ಇದುವರೆಗೂ ಜಾರಿಯಲ್ಲಿ. ಅಂಕಪಟ್ಟಿ ವಿತರಣೆ ಯೋಜನೆಯಡಿ ಅನುದಾನ ಪೋಲಾಗಿರುವ ಶಂಕೆಯಿದ್ದು, ಕೂಡಲೇ ತನಿಖೆಗೊಳಪಡಿಸಬೇಕು. ನಿಗದಿತ ಸಮಯದಲ್ಲಿ ಲಿತಾಂಶ ೋಷಣೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಸಿದರು. ಕೇಂದ್ರ ಸಮಿತಿ ಸದಸ್ಯ ಅಮರೇಶಕಡಗದ, ತಾಲೂಕಾಧ್ಯಕ್ಷ ನಾಗರಾಜ್, ಪದಾಧಿಕಾರಿಗಳಾದ ಶಿವಕುಮಾರ, ಸಮೀರ, ಮೌನೇಶ, ದರ್ಶನ, ಪ್ರಶಾಂತ, ಆಶಾ, ಪವಿತ್ರಾ, ಹುಲಿಗೆಮ್ಮ, ಉಮಾ, ಅಕ್ಷತಾ, ಸಂಗೀತಾ, ಸುರೇಶ, ಪ್ರಶಾಂತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net