ಆಪತ್ತು ಎದುರಿಸಲು ಜಾಗೃತಿ ಅವಶ್ಯ

Gangavathi chikkajantakallu school ndrf visit
ಗಂಗಾವತಿ ತಾಲೂಕಿನ ಚಿಕ್ಕಜಂತಕಲ್ ಪ್ರೌಢ ಶಾಲೆಯಲ್ಲಿ ವಿಪತ್ತು ನಿರ್ವಹಣೆಯ ಕಲ್ಪಿತ ಪ್ರದರ್ಶನಕ್ಕೆ ಪಿಐ ಅಜಯಕುಮಾರ ಶನಿವಾರ ಚಾಲನೆ ನೀಡಿದರು. ಗ್ರಾಪಂ ಅಧ್ಯಕ್ಷೆ ನೇತ್ರಾವತಿ ವೆಂಕೋಬ ಬಿಂಗಿ, ಉಪಾಧ್ಯಕ್ಷ ನಾಗಪ್ಪ ಬಲಕುಂದಿ, ಸದಸ್ಯೆ ಲಕ್ಷ್ಮಮ್ಮ ಬೆಟ್ಟಪ್ಪ, ಪಿಡಿಒ ಮಲ್ಲಿಕಾರ್ಜುನ ಕಡಿವಾಳರ್ ಇತರರಿದ್ದರು.
Published on

ಗಂಗಾವತಿ: ಸಂಭವನವೀಯ ಆಪತ್ತುಗಳನ್ನು ಸಮರ್ಪಕವಾಗಿ ಎದುರಿಸಲು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಪ್ರಾತ್ಯಕ್ಷಿಕೆ ಮೂಲಕ ರಕ್ಷಣಾ ಕ್ರಮ ಹೇಳಿಕೊಡಲಾಗುತ್ತಿದೆ ಎಂದು ಎನ್‌ಡಿಆರ್‌ಎ್ ಪಿಐ ಅಜಯಕುಮಾರ ಹೇಳಿದರು.

ತಾಲೂಕಿನ ಚಿಕ್ಕಜಂತಕಲ್ ಪ್ರೌಢ ಶಾಲೆಯಲ್ಲಿ ಎನ್‌ಡಿಆರ್‌ಎ್ ತಂಡದಿಂದ ಶನಿವಾರ ಹಮ್ಮಿಕೊಂಡಿದ್ದ ವಿಪತ್ತು ನಿರ್ವಹಣೆಯ ಕಲ್ಪಿತ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಬೆಟಾಲಿಯನ್ 10ನೇ ತಂಡದಿಂದ ತಾಲೂಕಿನ ನದಿ ಪಾತ್ರದ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದ್ದು, ಸಂಭವನೀಯ ವಿಪತ್ತು, ಪ್ರವಾಹ ಸ್ಥಳಗಳಿಗೆ ಆಗಮಿಸಿ ಸಮುದಾಯ ಜಾಗತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಶಾಲಾ ಮಕ್ಕಳಿಗೆ ತರಬೇತಿ ನೀಡುವ ಮೂಲಕ ಸಂಭವನೀಯ ಅತಿವಷ್ಟಿ ಹಾಗೂ ಅನಾವಷ್ಟಿ ಸಂದರ್ಭದಲ್ಲಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ ಎಂದರು.

ಪ್ರಕತಿ ವಿಕೋಪ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆ, ಪ್ರವಾಹ ರಕ್ಷಣೆ, ಅನಿಲ ಸೋರಿಕೆ ತಡೆಗಟ್ಟುವಿಕೆ, ಸುನಾಮಿ, ಭೂಕಂಪ, ಅಗ್ನಿ ಅವಘಡ ಹಾಗೂ ಸಿಡಿಲು ಬಡಿತದಿಂದ ರಕ್ಷಣೆ ಸೇರಿ ಕಟ್ಟಡ ಕುಸಿತ, ರಾಸಾಯನಿಕ ಪದಾರ್ಥಗಳಿಂದಾಗುವ ಅನಾಹುತಗಳ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಲಾಯಿತು.

ತಂಡದ ಎಎಸೈಗಳಾದ ಸೋಮ ವೀರಕುಮಾರ, ವಜ್ರಚೇತನ, ಗ್ರಾಪಂ ಅಧ್ಯಕ್ಷೆ ನೇತ್ರಾವತಿ ವೆಂಕೋಬ ಬಿಂಗಿ, ಉಪಾಧ್ಯಕ್ಷ ನಾಗಪ್ಪ ಬಲಕುಂದಿ, ಸದಸ್ಯೆ ಲಕ್ಷ್ಮಮ್ಮ ಬೆಟ್ಟಪ್ಪ, ಪಿಡಿಒ ಮಲ್ಲಿಕಾರ್ಜುನ ಕಡಿವಾಳರ್, ಆರ್‌ಐ ಹಾಲೇಶ ಗುಂಡಿ, ಮುಖ್ಯಶಿಕ್ಷಕರಾದ ಆರ್.ಟಿ. ನಾಯ್ಕ, ಅಣ್ಣಪ್ಪ ಬಿರಾದಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net