ಶ್ರೀ ಕವೀಂದ್ರ ತೀರ್ಥರ ಆರಾಧನೆ ನಾಳೆಯಿಂದ

Kavindrathirtharu
ಶ್ರೀ ಕವೀಂದ್ರ ತೀರ್ಥರ
Published on

ಗಂಗಾವತಿ: ತಾಲೂಕಿನ ನವವೃಂದಾವನಗಡ್ಡಿಯಲ್ಲಿ ಶ್ರೀ ಕವೀಂದ್ರ ತೀರ್ಥರ ಆರಾಧನೆ ಮಹೋತ್ಸವ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಿಂದ ಏ.5 ಮತ್ತು 6ರಂದು ಹಮ್ಮಿಕೊಳ್ಳಲಾಗಿದೆ.

ಸರ್ವೋಚ್ಛ ನ್ಯಾಯಾಲಯ ಆದೇಶದಂತೆ ಪೂರ್ವಾರಾಧನೆ ಮತ್ತು ಮಧ್ಯಾರಾಧನೆ ಮಧ್ಯಾಹ್ನದವರೆಗೆ ನೆರವೇರಿಸಲಾಗುವುದು. ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಏ.5ರಂದು ಪೂರ್ವಾರಾಧನೆ, ಏ.6ರಂದು ಮಧ್ಯಾರಾಧನೆ ಮಧ್ಯಾಹ್ನದವರೆಗೆ ನೆರವೇರಿಸಲಾಗುವುದು.

ಶ್ರೀರಾಮನವಮಿ ಹಿನ್ನೆಲೆಯಲ್ಲಿ ಮೂಲರಾಮ ದೇವರು ಮೊದಲಾದ ಸಂಸ್ಥಾನ ಪ್ರತಿಮೆಗಳಿಗೆ ಮಹಾಭಿಷೇಕ, ಶ್ರೀ ಕವೀಂದ್ರ ತೀರ್ಥರ ಮೂಲ ವೃಂದಾವನಕ್ಕೆ ಮಹಾಪಂಚಾಮೃತ ಅಭಿಷೇಕ, ಮೂಲರಾಮದೇವರ ಪೂಜೆ, ತಪ್ತ ಮುದ್ರಾಧಾರಣೆ, ವಿದ್ವಾಂಸರ ಪ್ರವಚನ, ವಿದ್ವತ್ ಗೋಷ್ಠಿ, ಶ್ರೀಗಳ ಅನುಗ್ರಹ ಸಂದೇಶ, ಅಲಂಕಾರ ಸಂತರ್ಪಣೆ, ತೀರ್ಥ ಪ್ರಸಾದ ಮತ್ತು ಲಮಂತ್ರಾಕ್ಷತೆ ವಿತರಣೆ ಜರುಗಲಿದೆ.

ಬಿಸಿಲು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ಬೆಳಗ್ಗೆ 9 ಗಂಟೆಯೊಳಗೆ ನೆರವೇರಿಸಲಾಗುವುದು ಎಂದು ಆನೆಗೊಂದಿ ಶ್ರೀರಾಘವೇಂದ್ರ ಸ್ವಾಮಿ ಮಠದ ವ್ಯವಸ್ಥಾಪಕ ಸುಮಂತ ಕುಲ್ಕರ್ಣಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net