ಆನಗೊಂದಿಯಲ್ಲಿ ನಾಡಕಚೇರಿ ಪ್ರಾರಂಭಿಸಿ

MANAVI SALIKE
ತಾಲೂಕಿನ ಆನಗೊಂದಿಯಲ್ಲಿ ನಾಡಕಚೇರಿ ಆರಂಭ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ಗಂಗಾವತಿ ತಾಪಂ ಮಂಥನ ಸಭಾಂಗಣದ ಮುಂದೆ ಪ್ರಭಾರ ತಹಸೀಲ್ದಾರ್ ರವಿ ಎಸ್.ಅಂಗಡಿಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ, ಪದಾಧಿಕಾರಿಗಳಾದ ಜಡಿಯಪ್ಪ ಹಂಚಿನಾಳ, ರಾಘು ಕಡೇಬಾಗಿಲು ಇತರರಿದ್ದರು.
Published on

ಗಂಗಾವತಿ: ತಾಲೂಕಿನ ಆನಗೊಂದಿಯಲ್ಲಿ ನಾಡಕಚೇರಿ ಆರಂಭ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ನಗರದ ತಾಪಂ ಮಂಥನ ಸಭಾಂಗಣದ ಮುಂದೆ ಪ್ರಭಾರ ತಹಸೀಲ್ದಾರ್ ರವಿ ಎಸ್.ಅಂಗಡಿಗೆ ಬುಧವಾರ ಮನವಿ ಸಲ್ಲಿಸಿದರು.

ಜಿಲ್ಲಾ ಮತ್ತು ತಾಲೂಕು ಸಮಿತಿ ಸದಸ್ಯರೊಂದಿಗೆ ಭೇಟಿಯಾದ ಪದಾಧಿಕಾರಿಗಳು ಆನೆಗೊಂದಿ ಭಾಗದಲ್ಲಿ ಅಗತ್ಯವಿರುವ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿದರು. ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ, ಐತಿಹಾಸಿಕ ಹಿನ್ನೆಲೆ ಆನೆಗೊಂದಿ ಭಾಗದಲ್ಲಿ ಮೂರ‌್ನಾಲ್ಕು ಗ್ರಾಪಂಗಳನ್ನೊಳಗೊಂಡಿದ್ದು, ಅತಿ ಹೆಚ್ಚು ಜನಸಂಖ್ಯೆ ಹೊಂದಿದೆ.

ಅದರಂತೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಆನೆಗೊಂದಿ ಭಾಗದ ಸಂಗಾಪುರ, ಮಲ್ಲಾಪುರ, ಸಣಾಪುರ ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಸರ್ಕಾರ ಯೋಜನೆಗಳಿಗೆ ಸಂಬಂಧಿಸಿದ ಪ್ರಮಾಣಪತ್ರಕ್ಕಾಗಿ ಗಂಗಾವತಿಗೆ ಬರಬೇಕಿದೆ. ನಾಡಕಚೇರಿ ಆರಂಭಿಸಿದರೆ ವಿದ್ಯಾರ್ಥಿಗಳು, ಯುವಕರು ಮತ್ತು ವೃದ್ಧರಿಗೆ ಅನುಕೂಲವಾಗಲಿದ್ದು, ಪಿಯು ಕಾಲೇಜು ಆರಂಭಿಸಬೇಕು. ಸಣಾಪುರಕ್ಕೆ ಪ್ರೌಢ ಶಾಲೆ, ಪೊಲೀಸ್ ಠಾಣೆ ಮಂಜೂರು ಮಾಡುವಂತೆ ಒತ್ತಾಯಿಸಿದರು.

ಪದಾಧಿಕಾರಿಗಳಾದ ಜಡಿಯಪ್ಪ ಹಂಚಿನಾಳ, ರಾಘು ಕಡೇಬಾಗಿಲು,ದುರುಗೇಶ ಹೊಸಳ್ಳಿ, ಬಸವರಾಜ ನಾಯಕ, ಜಂಬಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net