

ಗಂಗಾವತಿ: ಜನಪದ ಸಂಸ್ಕೃತಿ ನಮ್ಮ ಪರಂಪರೆಯ ತವರೂರು ಆಗಿದ್ದು, ಸಂಬಂಧಗಳನ್ನು ಗಟ್ಟಿಗೊಳಿಸುವ ಶ್ರೇಷ್ಠ ಸಂಸ್ಕೃತಿ ಎಂದು ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನ ಪ್ರಾಚಾರ್ಯೆ ಡಾ.ಕೆ.ಎಸ್.ಶೋಭಾ ಹೇಳಿದರು.
ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಾನಪದ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜನಪದ ಸೊಗಡಿನಲ್ಲಿ ಸಂದೇಶವಿದ್ದು, ಬಾಂಧವ್ಯ ಬೆಸೆಯುವ ಅಮೂಲ್ಯ ಸಂಪತ್ತಿದೆ ಎಂದರು.
ಜಾನಪದ ವಸ್ತುಸಂಗ್ರಹಾಲಯ ಉದ್ಘಾಟಿಸಿದ ಪ್ರಾಧ್ಯಾಪಕ ಪ್ರೊ.ಸುಂಕೇಶ್ವರ ಕರಿಗೂಳಿ ಮಾತನಾಡಿ, ಸಂಸ್ಕೃತಿ ಪುನಃರುಜ್ಜೀವನಗೊಳಿಸುವಲ್ಲಿ ಮತ್ತು ಸರ್ಕಾರಿ ಕಾಲೇಜುಗಳನ್ನು ಸಬಲೀಕರಣಗೊಳಿಸುವಲ್ಲಿ ಜಾನಪದ ಉತ್ಸವ ಪೂರಕ ಎಂದರು.
ನಂತರ ಕಾಲೇಜು ವಿದ್ಯಾರ್ಥಿಗಳ ಜಾನಪದ ನೃತ್ಯ, ಗಾಯನ, ದೇಸಿ ಆಟ, ದೇಸಿ ಮೇಳ ಆಹಾರ ಹಮ್ಮಿಕೊಳ್ಳಲಾಗಿತ್ತು. ದೇಸಿ ಆಟಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ತಾಪಂ ಮಾಜಿ ಅಧ್ಯಕ್ಷ ಮಹ್ಮದ್ ರಫಿ, ಪಿಎಸ್ಸೆಸ್ಸೆನ್ ಮಾಜಿ ಸದಸ್ಯ ರಮೇಶ ಕುಲ್ಕರ್ಣಿ, ಗ್ರಾಪಂ ಅಧ್ಯಕ್ಷ ಶಾಂತಪ್ಪ, ಸದಸ್ಯ ರೆಡ್ಡಿ ವೀರರಾಜು, ಪಿಡಿಒ ನಾಗೇಶ ಕುರ್ಡಿ, ಕಾರ್ಯಕ್ರಮ ಸಂಯೋಜಕ ಕೆ.ತಾತಪ್ಪ, ಪ್ರಾಧ್ಯಾಪಕರಾದ ಡಾ.ಸರ್ರಾಜ್, ರವಿರಾಜ್, ಡಾ.ಶಿವಕುಮಾರ, ಶಂಕ್ರಪ್ಪ, ವಿರೂಪಾಕ್ಷಪ್ಪ, ಜಬೀನ ಬೇಗಂ, ವಿನಾಯಕ ಜಹಾಂಗೀರ್, ವೆಂಕಟರಾಜು, ದೇವರಾಜ್, ಪೀರಾವಲಿ, ಪರಶುರಾಮ್, ಸಂಧ್ಯಾ, ಈಶಪ್ಪ ಮೇಟಿ ಇತರರಿದ್ದರು.