ತಳ್ಳು ಬಂಡಿಗಳ ತೆರವಿಗೆ ಬೀದಿಬದಿ ವ್ಯಾಪಾರಿಗಳ ಆಕ್ರೋಶ

Gangavati Street Side Traders Appeal
ಗಂಗಾವತಿಯ ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿಗೆ ಬೀದಿ ಬದಿ ವ್ಯಾಪಾರಿಗಳು ಗುರುವಾರ ಮನವಿ ಸಲ್ಲಿಸಿದರು. ಸಂಘದ ಪ್ರತಿನಿಧಗಿಳಾದ ಇಡ್ಲಿ ಪಂಪಣ್ಣ, ಖಾಸೀಂಸಾಬ್, ಬಸವರಾಜ್ ಇತರರಿದ್ದರು.
Published on

ಗಂಗಾವತಿ: ರಸ್ತೆ ಬದಿಯಲ್ಲಿ ತಳ್ಳು ಬಂಡಿಗಳ ವ್ಯಾಪಾರ ಸ್ಥಳಾಂತರಕ್ಕೆ ವ್ಯಾಪಾರಿಗಳು ವಿರೋಧಿಸಿದ್ದು, ವ್ಯಾಪಾರಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ಬೀದಿ ಬದಿ ವ್ಯಾಪಾರಿಗಳು ನಗರದ ಗಾಂಧಿ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ನಗರಸಭೆ ಪೌರಾಯುಕ್ತ ಅರವಿಂದ ಜಮಖಂಡಿಗೆ ಮನವಿ ಸಲ್ಲಿಸಿದರು.

ಸಂಘದ ಪ್ರತಿನಿಧಿ ಇಡ್ಲಿ ಪಂಪಾಪತಿ ಮಾತನಾಡಿ, ಬೀದಿ ಬದಿ ವ್ಯಾಪಾರಿಗಳ ಗಮನಕ್ಕೆ ತರದೆ ಸ್ಥಳಾಂತರಿಸುವುದು ಸರಿಯಲ್ಲ. ಗ್ರಾಮೀಣ ಭಾಗದಿಂದ ನಗರಕ್ಕೆ ಬರುವ ಜನ, ರಸ್ತೆ ಬದಿಯ ತಳ್ಳು ಬಂಡಿಗಳಲ್ಲಿ ಹೆಚ್ಚು ವ್ಯಾಪಾರ ನಡೆಸುತ್ತಿದ್ದು, ಗುಂಡಮ್ಮಕ್ಯಾಂಪ್‌ಗೆ ಸ್ಥಳಾಂತರಿಸಿದರೆ ವ್ಯಾಪಾರಿಗಳಿಗೆ ತೊಂದರೆಯಾಗಿದೆ. ಬೀದಿ ಬದಿಯ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಲು ನಗರಾಡಳಿತ ಹುನ್ನಾರ ನಡೆಸಿದ್ದು, ಇದರಿಂದ ಬಹುತೇಕ ವ್ಯಾಪಾರಿಗಳು ಬೀದಿ ಪಾಲಾಗಲಿದ್ದಾರೆ ಎಂದರು. ಸಂಘದ ಸದಸ್ಯರಾದ ಖಾಸೀಂಸಾಬ್, ಬಸವರಾಜ್, ರೋಷನ್‌ಬೇಗ್, ಬಾಬುಮೀಯಾ, ಎಸ್. ಜಾನಿ, ಶರಣಪ್ಪ, ಹುಲಿಗೆಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net