ವಿದ್ಯಾರ್ಥಿಗಳು ತರಗತಿ ತಪ್ಪಿಸದಿರಲಿ

Untitled design (19)
Published on

ಗಂಗಾವತಿ: ಶಿಕ್ಷಣದಿಂದ ಎಲ್ಲ ಹಕ್ಕುಗಳನ್ನು ಪಡೆಯಬಹುದು ಜತೆಗೆ ಉನ್ನತ ಸಾಧನೆಗೆ ದಾರಿಯಾಗಿದೆ ಎಂದು ನಗರಸಭೆ ಸದಸ್ಯೆ ಹುಲಿಗೆಮ್ಮ ಕಿರಿಕಿರಿ ಹೇಳಿದರು.

ನಗರದ 32ನೇ ವಾರ್ಡ್ ಹಿರೇಜಂತಕಲ್‌ನ ಓಣಿ ಬಸವಣ್ಣ ದೇವಾಲಯದ ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಸಹಿಪ್ರಾ ಶಾಲೆಯಿಂದ ಶನಿವಾರ ಹಮ್ಮಿಕೊಂಡಿದ್ದ ಸಮುದಾಯ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳು ಪ್ರತಿದಿನ ಶಾಲೆಯಲ್ಲಿ ಹೇಳಿದ ಪಾಠಗಳನ್ನು ಓದಬೇಕು. ಯಾವುದೇ ಕಾರಣಕ್ಕೂ ತರಗತಿ ತಪ್ಪಿಸಬಾರದು ಎಂದರು.

ಮಾಜಿ ಸದಸ್ಯ ಹುಸೇನಪ್ಪ ಹಂಚಿನಾಳ್ ಮಾತನಾಡಿ, ಜಾಗೃತಿ ಕಾರ್ಯಕ್ರಮದ ಮೂಲಕ ಶಿಕ್ಷಕರು ಜನರಲ್ಲಿ ಶಿಕ್ಷಣದ ಮಹತ್ವದ ಬಗ್ಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ ಕುರಿತು ಜಾಗೃತಿ ಮೂಡಿಸಲಾಯಿತು.

ಮುಖ್ಯಶಿಕ್ಷಕ ವಿ.ವಿ.ಗೊಂಡಬಾಳ್, ಎಸ್‌ಡಿಎಂಸಿ ಸದಸ್ಯರಾದ ಹನುಮಂತಪ್ಪ ಕೋರಿ, ಲಲಿತಾ, ಶಿಕ್ಷಕರಾದ ನಸೀಮಾ, ಮಾರೆಪ್ಪ, ಸುಧಾ, ಜಯಶ್ರೀ, ಶಾರದಾ ಜೋಶಿ, ಸುನಂದಾ, ಸರಿತಾ, ಶಿವಮ್ಮ, ಕುಮಾರಸ್ವಾಮಿ, ಪ್ರಮುಖರಾದ ಪರಶುರಾಂ ಕಿರಿಕಿರಿ, ಹುಲುಗಪ್ಪ ಗೋಟೂರು, ಹುಸೇನಪ್ಪ ಕಲ್ಮನಿ, ಹುಲುಗಪ್ಪ ಮುಂಡಸ್ತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net