ಇನ್ನೆರಡು ತಿಂಗಳಲ್ಲಿ ನಗರಸಭೆ ಕಟ್ಟಡ ಕಾಮಗಾರಿ ಪೂರ್ಣ: ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ

18042022 gangavati cmc new building visit MLA
Published on

ಗಂಗಾವತಿ: ನಗರಸಭೆಯ ಸುಸಜ್ಜಿತ ಕಟ್ಟಡ ಕಾಮಗಾರಿ ಇನ್ನೆರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

ಇಲ್ಲಿನ ನಗರಸಭೆ ಹಳೇ ಕಚೇರಿ ಆವರಣದಲ್ಲಿ ಅಮೃತಸಿಟಿ ಯೋಜನೆಯಡಿ ನಿರ್ಮಿಸುತ್ತಿರುವ 3 ಕೋಟಿ ರೂ.ವೆಚ್ಚದ ಕಟ್ಟಡ ಕಾಮಗಾರಿ ಸೋಮವಾರ ವೀಕ್ಷಿಸಿ ಮಾತನಾಡಿದರು. ನಾಲ್ಕು ವರ್ಷದ ಹಿಂದೆ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಕೋವಿಡ್ ಕಾರಣ ನನೆಗುದಿಗೆ ಬಿದ್ದಿತ್ತು. ಈವರೆಗೆ ಗುತ್ತಿಗೆದಾರರಿಗೆ 1.70 ಕೋಟಿ ರೂ.ಪಾವತಿಯಾಗಿದ್ದು, ನಗರೋತ್ಥಾನ ಯೋಜನೆಯಡಿ ಹೆಚ್ಚುವರಿ ಕಾಮಗಾರಿಗಾಗಿ 1.05 ಕೋಟಿ ರೂ.ಮಂಜೂರಾಗಿದೆ. ವಿದ್ಯುತ್ ಮತ್ತು ನೀರಿನ ವ್ಯವಸ್ಥೆಗೆ 25ಲಕ್ಷ ರೂ. ನಗರಸಭೆ ಉಳಿತಾಯದ ಬಜೆಟ್ ಬಳಸಿಕೊಳ್ಳಲಾಗಿದೆ. ಶೇ.50 ಕಾಮಗಾರಿ ಮುಗಿದಿದ್ದು, ಹಿರಿಯ ನಾಗರಿಕರು ಮತ್ತು ಅಂಗವಿಕಲರ ಅನುಕೂಲಕ್ಕಾಗಿ ಲಿಫ್ಟ್ ಮತ್ತು ರಾಂಪ್ ನಿರ್ಮಿಸುವಂತೆ ಸೂಚನೆ ನೀಡಲಾಗಿದೆ. ಮತ್ತಷ್ಟು ವಿಳಂಬ ಮಾಡದಂತೆ ನಗರಸಭೆ ತಾಂತ್ರಿಕ ವರ್ಗ ಮತ್ತು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಅನುದಾನದ ಕೊರತೆ ಇಲ್ಲ ಎಂದರು.

ಎಇಇ ಎಸ್.ಅಭಿಷೇಕ ಮಾತನಾಡಿದರು. ನಯೋಪ್ರಾ ಅಧ್ಯಕ್ಷ ಮಹಾಲಿಂಗಪ್ಪ ಬನ್ನಿಕೊಪ್ಪ, ನಗರಸಭೆ ವಿಪಕ್ಷ ನಾಯಕ ನವೀನ್ ಮಾಲಿಪಾಟೀಲ್, ಸದಸ್ಯರಾದ ಉಮೇಶ ಸಿಂಗನಾಳ್, ಪರಶುರಾಮ್ ಮಡ್ಡೇರ್, ವಾಸುದೇವ ನವಲಿ, ಅಜಯ ಬಿಚ್ಚಾಲಿ, ವೆಂಕಟರಮಣ, ಶರಭೋಜಿರಾವ್ ಗಾಯಕ್ವಾಡ್, ನೀಲಕಂಠಪ್ಪ ಕಟ್ಟಿಮನಿ, ಮಾಜಿ ಸದಸ್ಯ ರಾಚಪ್ಪ ಸಿದ್ದಾಪುರ, ಜೆಇ ಶಂಕರಗೌಡ ಇತರರಿದ್ದರು.

ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದು, ಮರು ರಚನೆ ಸಂದರ್ಭದಲ್ಲಿ ಅವಕಾಶ ದೊರೆಯುವ ವಿಶ್ವಾಸವಿದೆ. ಕ್ಷೇತ್ರದ ಅಭಿವೃದ್ಧಿ ಕಾರ್ಯ ನಿರೀಕ್ಷೆ ಮೀರಿ ಕೈಗೊಂಡಿದ್ದು, ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗಿದೆ.| ಪರಣ್ಣ ಮುನವಳ್ಳಿ ಶಾಸಕ, ಗಂಗಾವತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net