ಬಸಾಪುರದಲ್ಲಿ ಉಡಾನ್ ಅನುಷ್ಠಾನ ಮಾಡಿ

Gangavathi members of the Bar Association
ಗಂಗಾವತಿ ತಾಲೂಕಿನಲ್ಲಿರುವ ರೈಲ್ವೆ ಯೋಜನೆ ಮತ್ತು ರಾಜ್ಯ ಹೆದ್ದಾರಿಗಳ ವಿಸ್ತರಣೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘ ಮತ್ತು ತಾಲೂಕು ವಕೀಲರ ಸಂಘದ ಸದಸ್ಯರು ಸಂಸದ ಕೆ.ರಾಜಶೇಖರ ಹಿಟ್ನಾಳಗೆ ಮನವಿ ಸಲ್ಲಿಸಿದರು. ಕಲ್ಮಠದ ಡಾ.ಕೊಟ್ಟೂರುಸ್ವಾಮೀಜಿ, ವಕೀಲರ ಸಂಘದ ತಾಲೂಕು ಕಾರ್ಯದರ್ಶಿ ಎಚ್.ಎಂ.ಮಂಜುನಾಥ, ಪದಾಧಿಕಾರಿಗಳಾದ ಶರಣೇಗೌಡ ಮಾಲಿಪಾಟೀಲ್, ಸುರೇಶ ಸಿಂಗನಾಳ್ ಇತರರಿದ್ದರು.
Published on

ಗಂಗಾವತಿ: ತಾಲೂಕಿನಲ್ಲಿರುವ ರೈಲು ಯೋಜನೆ ಮತ್ತು ರಾಜ್ಯ ಹೆದ್ದಾರಿಗಳ ವಿಸ್ತರಣೆ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘ ಮತ್ತು ತಾಲೂಕು ವಕೀಲರ ಸಂಘದ ಸದಸ್ಯರು ನಗರದಲ್ಲಿ ಸಂಸದ ಕೆ.ರಾಜಶೇಖರ ಹಿಟ್ನಾಳಗೆ ಸೋಮವಾರ ಮನವಿ ಸಲ್ಲಿಸಿದರು.

ತಾಲೂಕು ವಕೀಲರ ಸಂಘದ ಕಾರ್ಯದರ್ಶಿ ಎಚ್.ಎಂ.ಮಂಜುನಾಥ ಮಾತನಾಡಿ, ಬೆಂಗಳೂರು ಮತ್ತು ಹುಬ್ಬಳ್ಳಿ ರೈಲು ಮಾರ್ಗವನ್ನು ಸಿಂಧನೂರುವರೆಗೂ ವಿಸ್ತರಿಸಿದ್ದು ಪ್ರಶಂಸನೀಯ. ಹಾಗೆಯೇ ಗಂಗಾವತಿ, ಕಂಪ್ಲಿ ಮತ್ತು ದರೋಜಿ ರೈಲ್ವೆ ಯೋಜನೆಯನ್ನು ಶೀಘ್ರವೇ ಸಾಕಾರಗೊಳಿಸಬೇಕಿದೆ. ಬಸಾಪುರದಲ್ಲಿ ಉಡಾನ್ ಯೋಜನೆ ಅನುಷ್ಠಾನ, ಗಿಣಿಗೇರ- ರಾಯಚೂರ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಪರಿವರ್ತಿಸಿ. ಚತುಷ್ಪ ರಸ್ತೆ ನಿರ್ಮಾಣ, ಬೂದಗುಂಪಾ, ಗಂಗಾವತಿ, ಕಂಪ್ಲಿ, ಕುಡತಿನಿ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವುದು. ಗೋವಾ, ಮುಂಬೈ, ತಿರುಪತಿ, ಹೈದರಾಬಾದ್ ರೈಲ್ವೆ ಸಂಚಾರ ಸಿಂಧನೂರುವರೆಗೆ ವಿಸ್ತರಣೆ ಮಾಡಿ. ಕಾರಟಗಿ ತಾಲೂಕಿನ ನಂದಿಹಳ್ಳಿ ಮತ್ತು ಸಿರಗುಪ್ಪ ತಾಲೂಕಿನ ನಿಟ್ಟೂರು ಬಳಿಯ ತುಂಗಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವಂತೆ ಒತ್ತಾಯಿಸಿದರು.

ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ, ಸಂಘದ ಉಪಾಧ್ಯಕ್ಷ ಕೆ.ಚನ್ನಬಸಯ್ಯಸ್ವಾಮಿ, ಕಾರ್ಯದರ್ಶಿ ಶರಣೇಗೌಡ ಮಾಲಿಪಾಟೀಲ್, ಖಜಾಂಚಿ ಸುರೇಶ ಸಿಂಗನಾಳ, ನಯೋಪ್ರಾ ಅಧ್ಯಕ್ಷ ಸೈಯ್ಯದ್ ಇಲಿಯಾಸ್ ಖಾದ್ರಿ, ನಗರಸಭೆ ವಿಪಕ್ಷ ನಾಯಕ ಮನೋಹರ ಸ್ವಾಮಿ ಹಿರೇಮಠ, ಮಾಜಿ ಅಧ್ಯಕ್ಷ ಕೆ.ವೆಂಕಟೇಶ, ಮುಖಂಡರಾದ ಶೇಖ್ ಇಲಿಯಾಸ್, ಗಿರೀಶ್ ಗಾಯಕ್ವಾಡ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net