

ಗಂಗಾವತಿ: ವಿದ್ಯುತ್ ಮತ್ತು ಕೃಷಿ ಕ್ಷೇತ್ರ ಬಲಪಡಿಸಲು ರಾಜ್ಯ ಸರ್ಕಾರ ಹಲವು ಯೋಜನೆ ಹಮ್ಮಿಕೊಂಡಿದ್ದು, ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮರ್ಪಕ ಪೂರೈಕೆಗೆ ಮೊದಲ ಆದ್ಯತೆ ನೀಡಲಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ಲಿಂಗದಳ್ಳಿಯಲ್ಲಿ ಜೆಸ್ಕಾಂ ಹೊಸದಾಗಿ ನಿರ್ಮಿಸಿರುವ 33/11 ಕೆವಿ ವಿದ್ಯುತ್ ವಿತರಣೆ ಕೇಂದ್ರವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು. ವಿತರಣೆ ಕೇಂದ್ರ ವ್ಯಾಪ್ತಿಯ 6 ಗ್ರಾಮಗಳ ಅನುಕೂಲಕ್ಕಾಗಿ 5.41 ಕೋಟಿ ರೂ.ವೆಚ್ಚದಲ್ಲಿ ಕೇಂದ್ರ ಸ್ಥಾಪಿಸಲಾಗಿದ್ದು, ಹಿರೇಬೆಣಕಲ್, ಚಿಕ್ಕಬೆಣಕಲ್, ಮುಕ್ಕುಂಪಿ, ಲಿಂಗದಳ್ಳಿ, ಎಚ್‌ಆರ್‌ಜಿ ನಗರ, ಹೇಮಗುಡ್ಡಕ್ಕೆ ವಿದ್ಯುತ್ ಸಮರ್ಪಕ ಪೂರೈಕೆಯಾಗಲಿದೆ. ಗ್ರಾಮೀಣ ಭಾಗದಲ್ಲಿ ಲೋಡಶೆಡ್ಡಿಂಗ್ ತಪ್ಪಿಸಲು ವಿತರಣೆ ಕೇಂದ್ರಗಳಿಗೆ ಆದ್ಯತೆ ನೀಡಲಾಗಿದೆ. ಕೆರೆ ತುಂಬಿಸುವ ಯೋಜನೆ ಪ್ರಸ್ತಾವನೆಯಲ್ಲಿದ್ದು, ಪ್ರಮುಖ ಕೆರೆಗಳನ್ನು ಈಗಾಗಲೇ ಗುರುತಿಸಲಾಗಿದೆ. ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಕೆರೆ ತುಂಬಿಸುವ ಯೋಜನೆ ಸಹಕಾರಿಯಾಗಲಿದೆ ಎಂದರು.
ವಿದ್ಯುತ್ ವಿತರಣೆ ಕೇಂದ್ರಕ್ಕೆ ಭೂಮಿ ನೀಡಿದ ರೈತ ಯಮನಪ್ಪರನ್ನು ಜೆಸ್ಕಾಂ ವತಿಯಿಂದ ಸನ್ಮಾನಿಸಲಾಯಿತು. ಎಪಿಎಂಸಿ ಅಧ್ಯಕ್ಷ ಸಣ್ಣಕ್ಕಿ ನೀಲಪ್ಪ, ಜಿಪಂ ಸದಸ್ಯೆ ಲಕ್ಷ್ಮಮ್ಮ ಸಿದ್ದಪ್ಪ ನೀರಲೂಟಿ, ತಾಪಂ ಅಧ್ಯಕ್ಷ ಮಲ್ಲಿಕಾರ್ಜುನಗೌಡ ಪೊ.ಪಾಟೀಲ್, ಜೆಸ್ಕಾಂ ಉಪವಿಭಾಗ ಇಇ ಎಚ್.ಎಂ.ನಟರಾಜ್, ಶರ್ೀ, ಎಇಇ ಆರ್ೀಅಲಿ, ಎಇ ಭೀಮೇಶ, ಮುಖಂಡರಾದ ಯಮುನಪ್ಪ ವಿಠಲಾಪುರ, ಚನ್ನಪ್ಪ ಮಳಗಿ, ಮಂಜುನಾಥ, ಚಂದ್ರೇಗೌಡ, ವೀರೇಶ ಅಂಗಡಿ, ಗೌರೀಶ ಬಾಗೋಡಿ, ಎಚ್.ಸಿ.ಯಾದವ್ ಇತರರಿದ್ದರು.