ಹೋಂಸ್ಟೇಗಳಿಗೆ ಪರವಾನಗಿ ನೀಡಲು ಹವಾಮಾ ಒಪ್ಪಿಗೆ

meeting with officials
ಗಂಗಾವತಿ ತಾಲೂಕಿನ ಸಣಾಪುರ ಗ್ರಾಪಂ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಸಭೆಯಲ್ಲಿ ಹವಾಮಾ ಸೇರಿ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಶಾಸಕ ಗಾಲಿ ಜನಾರ್ದನರೆಡ್ಡಿ ಶನಿವಾರ ಚರ್ಚಿಸಿದರು. ಹವಾಮಾ ಆಯುಕ್ತ ವಿ.ರಮೇಶ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಇತರರಿದ್ದರು.
Published on

ಗಂಗಾವತಿ: ಪ್ರಾಧಿಕಾರ ವ್ಯಾಪ್ತಿಯ ಹೊರವಲಯದ ಪ್ರದೇಶದಲ್ಲಿ ಪ್ರವಾಸೋದ್ಯಮ ಇಲಾಖೆ ಪರವಾನಗಿ ನೀಡುವ ಹೋಂಸ್ಟೇಗಳಿಗೆ ಅನುಮತಿ ನೀಡಲು ಹವಾಮಾ ಒಪ್ಪಿದ್ದು, ಮನೆಗಳ ಹಕ್ಕುಪತ್ರಗಳಿಗಾಗಿ ಜಿಲ್ಲಾಡಳಿತದೊಂದಿಗೆ ಚರ್ಚಿಸಲಾಗಿದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.

ತಾಲೂಕಿನ ಸಣಾಪುರ ಗ್ರಾಪಂ ಕಚೇರಿಯಲ್ಲಿ ಹವಾಮಾ, ಪ್ರವಾಸೋದ್ಯಮ ಮತ್ತು ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದರು.

ಹವಾಮಾ ವ್ಯಾಪ್ತಿಯ ಹೊರವಲಯದಲ್ಲಿ ಹೋಂ ಸ್ಟೇಗಳನ್ನು ನಿರ್ಮಿಸಿದರೆ ಎನ್‌ಒಸಿ ನೀಡಲು ಹವಾಮಾ ಒಪ್ಪಿಕೊಂಡಿದ್ದು, ಪ್ರವಾಸೋದ್ಯಮ ಇಲಾಖೆ ಶಿಾರಸು ಮಾಡಬೇಕಿದೆ. ಹೆಚ್ಚು ಭೂಮಿ ಹೊಂದಿದ ಮಾಲೀಕರು ಹವಾಮಾಗೆ 50:50 ಅನುಪಾತದಲ್ಲಿ ಭೂಮಿ ನೀಡಿದರೆ, ಮೀಸಲು ಅನ್ವಯ ಹೋಂ ಸ್ಟೇ ನಡೆಸಲು ಅವಕಾಶ ದೊರೆಯಲಿದೆ. ಸಣಾಪುರ, ಹನುಮನಹಳ್ಳಿ ಇತರೆಡೆ ನಿರ್ಮಿಸಿರುವ ರೆಸಾರ್ಟ್‌ಗಳ ಉಳಿವಿಗೆ ಜಿಲ್ಲಾಡಳಿತದೊಂದಿಗೆ ಚರ್ಚಿಸಲಾಗುತ್ತಿದ್ದು, ನಿಯಮಾವಳಿ ಸರಳೀಕರಣಕ್ಕೆ ಮನವಿ ಮಾಡಲಾಗುವುದು. ವಿರುಪಾಪುರಗಡ್ಡಿಯಲ್ಲಿರುವ 24 ರೈತರಿಗೆ ಾರ್ಮ್‌ಹೌಸ್ ನಿರ್ಮಾಣಕ್ಕೆ ಅವಕಾಶ ಕಲ್ಪಿಸಲಾಗುತ್ತಿದ್ದು, ಆಧುನಿಕ ಕಟ್ಟಡ ನಿರ್ಮಿಸದೇ ಪಾರಂಪರಿಕ ರೀತಿ ಶೆಡ್‌ಗಳ ನಿರ್ಮಾಣಕ್ಕೆ ಪರವಾನಗಿ ನೀಡಲು ಹವಾಮಾ ಒಪ್ಪಿದೆ. ವಿರುಪಾಪುರಗಡ್ಡಿ ತೆರವು ವೇಳೆ ಸೂರು ಕಳೆದುಕೊಂಡ 72ಕುಟುಂಬಗಳಿಗೆ ತಿರುಮಲಾಪುರದಲ್ಲಿ ನಿವೇಶನ ಜತೆಗೆ ಹಕ್ಕುಪತ್ರ ವಿತರಿಸಲಾಗುವುದು ಎಂದರು.

ಹವಾಮಾ ವ್ಯಾಪ್ತಿಯ ಕ್ರಮಗಳು, ಪರವಾನಗಿ ಮತ್ತು ಕಾಯ್ದೆ ಕುರಿತು ಹವಾಮಾ ಆಯುಕ್ತ ವಿ.ರಮೇಶ ಮಾಹಿತಿ ನೀಡಿದರು. ಹವಾಮಾದಿಂದ ಆನೆಗೊಂದಿ, ಸಣಾಪುರ ಭಾಗದಲ್ಲಾಗುತ್ತಿರುವ ತೊಂದರೆ ಬಗ್ಗೆ ಗ್ರಾಮಸ್ಥರು ಮತ್ತು ರೆಸಾರ್ಟ್ ಮಾಲೀಕರು ಮಾಹಿತಿ ನೀಡಿದರು. ಇದಕ್ಕೂ ಮುನ್ನ ಅಂಜನಾದ್ರಿಯಲ್ಲಿ ನಿರ್ಮಿಸುತ್ತಿರುವ ಯಾತ್ರಿ ನಿವಾಸ, ಶಾಪಿಂಗ್ ಕಾಂಪ್ಲೆಕ್ಸ್, ಶೌಚಗೃಹ, ಡಾರ್ಮೆಟರಿ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ, ಗ್ರಾಮೀಣ ಠಾಣೆ ಪಿಐ ರಂಗಪ್ಪ, ಅರಣ್ಯ ಸಂರಕ್ಷಕ ಗುಂಡಪ್ಪ, ಗ್ರಾಪಂ ಅಧ್ಯಕ್ಷ ಅಶೋಕ, ಸದಸ್ಯ ನಾಗೇಶ, ಮುಖಂಡರಾದ ಮನೋಹರಗೌಡ ಹೇರೂರು, ಚಂದ್ರಶೇಖರ್ ಹಿರೂರ್, ಡಿ.ಕೆ.ಆಗೋಲಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net