

ಗಂಗಾವತಿ: ನಗರದ ಮೇದಾರ ಓಣಿಯ ಶ್ರೀ ನಿಮಿಷಾಂಬ ದೇವಿ ಜಯಂತ್ಯುತ್ಸವ ನಿಮಿತ್ತ ಸೋಮವಂಶ ಆರ್ಯ ಕ್ಷತ್ರಿಯ ಸಮಾಜದಿಂದ ಭಾವಚಿತ್ರದ ಮೆರವಣಿಗೆ ಬುಧವಾರ ಅದ್ದೂರಿಯಾಗಿ ನೆರವೇರಿತು.
ನಗರದ ಕೋಟೆ ಆಂಜನೇಯ ದೇಗುಲದಿಂದ ಶ್ರೀ ನಿಮಿಷಾಂಬ ದೇವಿ ದೇವಾಲಯದವರೆಗೆ ಕುಂಭ, ಕಳಸದೊಂದಿಗೆ ಮೆರವಣಿಗೆ ನೆರವೇರಿತು. ನಂತರ ದೇವಾಲಯದಲ್ಲಿನ ಶ್ರೀ ನಿಮಿಷಾಂಭ ದೇವಿ, ಶ್ರೀ ತುಳಜಾ ಭವಾನಿ ಮತ್ತು ಶ್ರೀ ಆಂಜನೇಯ ಸ್ವಾಮಿ ಮೂರ್ತಿಗಳಿಗೆ ಪಂಚಾಮೃತಾಭಿಷೇಕ, ಗಂಗೆ ಪೂಜೆ, ಕುಂಕುಮಾರ್ಚನೆ, ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ಸಾಮೂಹಿಕ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಆರ್ಯ ಕ್ಷತ್ರಿಯ ಸಮಾಜದ ಮುಖಂಡರಾದ ತುಕಾರಾಂ ಬಿದರಕರ್, ತುಕಾರಾಂ ಕಾಂಬ್ಳೆ, ವೆಂಕಣ್ಣ ಚಿತ್ರಗಾರ, ರಾಜಗೋಪಾಲ ಚವ್ಹಾಣ, ರಾಜು ಗವಳ್ಕರ್, ರುಕ್ಮೀಣಿಬಾಯಿ, ರೇಣುಕಾ ಚವ್ಹಾಣ, ಲಕ್ಷ್ಮಿಕಾಂತ ಚಿತ್ರಗಾರ, ಶ್ರೀನಿವಾಸ ಚವ್ಹಾಣ, ಕಾಶೀನಾಥ ಚಿತ್ರಗಾರ, ರಮೇಶ ಕಾಂಬ್ಳೇಕರ್ ಸೇರಿ ಶ್ರೀ ಸೋಮವಂಶ ಆರ್ಯ ಕ್ಷತ್ರಿಯ ಯುವಕ ಸಂಘ ಮತ್ತು ಮಹಿಳಾ ಮಂಡಳಿ ಪದಾಧಿಕಾರಿಗಳಿದ್ದರು.