ಲೋಕಕಲ್ಯಾಣಾರ್ಥ ಹನುಮಾನ್ ಚಾಲೀಸಾ ಪಾರಾಯಣ

Hanuman Chalisa recitation
ಗಂಗಾವತಿ ತಾಲೂಕಿನ ಸಂಗಾಪುರದ ಕಣಿವೆ ಆಂಜನೇಯ ದೇವಾಲಯದಲ್ಲಿ ಲೋಕಕಲ್ಯಾಣಾರ್ಥ ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು. ದೇವಾಲಯದ ಮುಖ್ಯಸ್ಥ ಜನಾದ್ರಿ ಲಿಂಗಪ್ಪ, ಪ್ರಮುಖರಾದ ಘನಮಠಸ್ವಾಮಿ ಸಂಗಾಪುರಮಠ, ಗೋಪಾಲಸ್ವಾಮಿ ಹಾಗೂ ಮಹಿಳಾ ಭಜಣಾ ಮಂಡಳಿ ಸದಸ್ಯರಿದ್ದರು.
Published on

ಗಂಗಾವತಿ: ತಾಲೂಕಿನ ಸಂಗಾಪುರದ ಕಣಿವೆ ಆಂಜನೇಯ ದೇವಾಲಯದಲ್ಲಿ ಲೋಕಕಲ್ಯಾಣಾರ್ಥ ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ದೇವಾಲಯದಲ್ಲಿ ಮೂರ್ತಿಗೆ ಅಭಿಷೇಕ, ಹೂವಿನ ಅಲಂಕಾರ, ಮಹಾಮಂಗಳಾರತಿ ಮತ್ತು ಪ್ರಸಾದ ವಿತರಣೆ ಜರುಗಿತು. ವಿವಿಧ ಗ್ರಾಮಗಳಿಂದ ಬಂದಿದ್ದ ಭಕ್ತರು ಮತ್ತು ಭಜನಾ ಮಂಡಳಿ ಪದಾಧಿಕಾರಿಗಳಿಂದ ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ ನೆರವೇರಿತು.

ದೇವಾಲಯದ ಮುಖ್ಯಸ್ಥ ಜನಾದ್ರಿ ಲಿಂಗಪ್ಪ ಮಾತನಾಡಿ, ಅಯೋಧ್ಯೆ ರಾಮಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ದಿನದಿಂದಲೇ ಹನುಮಾನ್ ಚಾಲೀಸಾ ಪಾರಾಯಣ ಹಮ್ಮಿಕೊಂಡಿದ್ದು, ಇದುವರೆಗೆ 1.38ಲಕ್ಷ ಬಾರಿ ಪಾರಾಯಣವಾಗಿದೆ.

ಪ್ರತಿ ಮಂಗಳವಾರ ಮತ್ತು ಶನಿವಾರ ಪಾರಾಯಣ ಅಭಿಯಾನ ಹಮ್ಮಿಕೊಂಡಿದ್ದು, ಜಿಲ್ಲೆಯ ವಿವಿಧ ಗ್ರಾಮಗಳಿಂದ ಭಕ್ತರು ಆಗಮಿಸುತ್ತಿದ್ದಾರೆ ಎಂದರು.

ಪ್ರಮುಖರಾದ ಘನಮಠಸ್ವಾಮಿ ಸಂಗಾಪುರಮಠ, ಗೋಪಾಲಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net