ಬೀಜೋಪಚಾರದಿಂದ ರೋಗ ನಿಯಂತ್ರಣ

Gangavathi Training Workshop on Pest Control
ಮಲ್ಲಾಪುರದ ಪಿಎಸ್ಸೆಸ್ಸೆನ್ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಕೀಟ ಬಾಧೆ ನಿಯಂತ್ರಣ ಕುರಿತು ತರಬೇತಿ ಕಾರ್ಯಾಗಾರಕ್ಕೆ ಕೆವಿಕೆ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್ ಚಾಲನೆ ನೀಡಿದರು. ಕೃಷಿ ಅಧಿಕಾರಿ ಪ್ರಕಾಶ, ಕೆವಿಕೆ ಬೇಸಾಯ ತಜ್ಞ ಡಾ.ನಾರಪ್ಪ, ಜಿಲ್ಲಾ ಕಷಿ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಬೀರಪ್ಪ ಇತರರಿದ್ದರು.
Published on

ಗಂಗಾವತಿ: ಬೀಜೋಪಚಾರದಿಂದ ಸಂಭವನೀಯ ಕೀಟಬಾಧೆ ತಡೆಗಟ್ಟಬಹುದಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಾಘವೇಂದ್ರ ಎಲಿಗಾರ್ ಹೇಳಿದರು.

ತಾಲೂಕಿನ ಮಲ್ಲಾಪುರದ ಪಿಎಸ್ಸೆಸ್ಸೆನ್ ಕಚೇರಿ ಆವರಣದಲ್ಲಿ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೀಟ ಬಾಧೆ ನಿಯಂತ್ರಣ ಕುರಿತು ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪ್ರಕಾಶ ಮಾತನಾಡಿ, ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಬೇಸಿಗೆ ಭತ್ತದ ಬೆಳೆಯ ನಾಟಿಯಲ್ಲಿ ನಿರತರಾಗಿದ್ದು, ಪ್ರಾತ್ಯಕ್ಷಿಕೆ ಮೂಲಕ ಭತ್ತದ ಗದ್ದೆಯಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.

ಕಾರ್ಯಾಗಾರದಲ್ಲಿ ಕಣೆ ಹುಳ, ಕಾಂಡ ಕೊರಕ, ಬೀಜೋಪಚಾರ, ಕೀಟನಾಶಕಗಳ ಸುರಕ್ಷಿತ ಬಳಕೆ ಕುರಿತು ರೈತರಿಗೆ ಮಾಹಿತಿ ನೀಡಲಾಯಿತು. ಕೆವಿಕೆ ಬೇಸಾಯ ತಜ್ಞ ಡಾ.ನಾರಪ್ಪ, ಜಿಲ್ಲಾ ಕಷಿ ತರಬೇತಿ ಕೇಂದ್ರದ ಕೃಷಿ ಅಧಿಕಾರಿ ಬೀರಪ್ಪ, ಪಿಎಸ್ಸೆಸ್ಸೆನ್ ಅಧ್ಯಕ್ಷ ಮಂಜುನಾಥ ಜನಾದ್ರಿ, ಉಪಾಧ್ಯಕ್ಷೆ ಯಲ್ಲಮ್ಮ, ನಿರ್ದೇಶಕರಾದ ರಾಮಕಷ್ಣ, ರವಿಚೈತನ್ಯರೆಡ್ಡಿ, ಪಂಪಾಪತಿ, ಗೌರೀಶ ಬಾಗೋಡಿ, ಚನ್ನಯ್ಯ, ರಾಂಬಾಬು, ಜಯಶ್ರೀ, ಕಾರ್ಯದರ್ಶಿ ನವೀನ, ಗ್ರಾಪಂ ಅಧ್ಯಕ್ಷ ಛತ್ರಪ್ಪ ಲಮಾಣಿ, ಪಿಡಿಒ ಶ್ರೀನಿವಾಸ ಪತ್ತಾರ, ಇ್ಕೋ ಸಂಸ್ಥೆಯ ಕ್ಷೇತ್ರಾಧಿಕಾರಿ ರಾಘವೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net