

ಗಂಗಾವತಿ: ನಗರದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ವೃತ್ತದಲ್ಲಿ ರಡ್ಡಿ ಸಮಾಜದಿಂದ ಮಹಾಯೋಗಿ ವೇಮನ ಜಯಂತ್ಯುತ್ಸವ ಭಾನುವಾರ ಆಚರಿಸಲಾಯಿತು.
ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ನಗರಸಭೆ ಮಾಜಿ ಸದಸ್ಯ ಮನೋಹರಗೌಡ ಹೇರೂರು ಮಾತನಾಡಿ, ಕಾಲಜ್ಞಾನಿ ವೇಮನರು ಉದ್ದಾತ್ತ ಸಂದೇಶಗಳನ್ನು ನೀಡುವ ಮೂಲಕ ಸಮಸಮಾಜ ನಿರ್ಮಾಣ ಮಾಡಿದರು ಎಂದರು. ನಗರಸಭೆ ಸದಸ್ಯ ಉಮೇಶ ಸಿಂಗನಾಳ, ತಾಲೂಕು ಅಧ್ಯಕ್ಷ ಆರ್.ಪಿ.ರೆಡ್ಡಿ, ಕೃಷಿಕ ಸಮಾಜದ ತಾಲೂಕು ಸದಸ್ಯ ಲಿಂಗನಗೌಡ ಹೇರೂರು, ಮುಖಂಡರಾದ ಜಗದೀಶಪ್ಪ ಸಿಂಗನಾಳ, ಶಿವಪ್ಪಯಲಬುರ್ಗಿ, ಚನ್ನಬಸವ ಇತರರಿದ್ದರು.
ತಾಲೂಕು ಆಡಳಿತ ಸೌಧದ ಕಚೇರಿ: ನಗರದ ತಾಲೂಕು ಆಡಳಿತದ ಸೌಧದ ಕಚೇರಿಯಲ್ಲಿ ಮಹಾಯೋಗಿ ವೇಮನ ಜಯಂತಿ ಆಚರಿಸಲಾಯಿತು. ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್ ಮಾತನಾಡಿದರು. ಶಿರಸ್ತೇದಾರರಾದ ರವಿಕುಮಾರ ನಾಯಕ್ವಾಡಿ, ಶ್ರೀಕಂಠೇಶ, ಶ್ರೀರಾಮ ಜೋಶಿ, ಮುಖಂಡರಾದ ರಾಜೇಶರೆಡ್ಡಿ, ಆರ್.ಪಿ.ರೆಡ್ಡಿ ಇತರರಿದ್ದರು.