

ಗಂಗಾವತಿ: ನಗರದ ತಾಲೂಕಾಡಳಿತ ಸೌಧದಲ್ಲಿ ತಾಲೂಕಾಡಳಿತ ಮತ್ತು ಯಾದವ ಸಮಾಜದಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಶನಿವಾರ ಆಚರಿಸಲಾಯಿತು.
ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡ ಗೌಡರ್ ಮಾತನಾಡಿ, ಸಕಲ ಜೀವರಾಶಿಗೂ ಶ್ರೇಯಸ್ಸನ್ನೇ ಬಯಸಿದ ಶ್ರೀಕೃಷ್ಣನ ಸಂದೇಶಗಳು ಸಾರ್ವಾಕಾಲಿಕ ಮೌಲ್ಯಯುತವಾಗಿವೆ ಎಂದರು.
ಉಪ ತಹಸೀಲ್ದಾರ್ ಕೃಷ್ಣವೇಣಿ, ಶಿರಸ್ತೇದಾರರಾದ ಶ್ರೀಕಂಠೇಶ, ಶಿವಶಂಕರ, ಕವಿತಾ, ಅನ್ನಪೂರ್ಣಾ, ನಾಗರತ್ನಮ್ಮ, ಯಾದವ ಸಮಾಜದ ಮುಖಂಡರಾದ ಎಚ್.ಸಿ.ಯಾದವ್, ಹುಲುಗಪ್ಪ, ರಮೇಶ ಇತರರಿದ್ದರು.
ಮಹಾನ್ ಕಿಡ್ಸ್ ಸ್ಕೂಲ್: ಗಂಗಾವತಿಯ ಶಾರದಾ ನಗರದ ಮಹಾಕಿಡ್ಸ್ ಸ್ಕೂಲ್‌ನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ಶ್ರೀಕೃಷ್ಣನ ವೇಷಭೂಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಕೃಷ್ಣನ ಬಾಲ್ಯ, ವಿಶ್ವರೂಪ ದರ್ಶನ, ಮಹಾಭಾರತ ವಿವಿಧ ಸನ್ನಿವೇಶಗಳನ್ನು ವಿದ್ಯಾರ್ಥಿಗಳು ವೇಷಭೂಷಣದೊಂದಿಗೆ ಪ್ರದರ್ಶಿಸಿದರು. ಶಾಲಾಡಳಿತ ಮಂಡಳಿ ಅಧ್ಯಕ್ಷ ನೇತ್ರಾಜ್ ಗುರುವಿನ್ ಮಠ ಮಾತನಾಡಿದರು. ಮುಖ್ಯಶಿಕ್ಷಕಿ ಸವಿತಾ, ಶಿಕ್ಷಕರಾದ ಪೂರ್ಣಿಮಾ, ಕುಮುದಿನಿ, ನಾಗರತ್ನಾ, ಲತಾಶ್ರೀ, ರೇಷ್ಮಾ, ಶಿಲ್ಪಾ, ವೈಷ್ಣವಿ, ಸುಮಾ, ಜ್ಯೋತಿ, ಮಂಜುನಾಥ, ಪಾಲಕ ಪ್ರತಿನಿಧಿಗಳಾದ ಭೀಮರಾಯ, ಜಾನ್ಹವಿ ಇತರರಿದ್ದರು.