ಶ್ರೀಕೃಷ್ಣನ ಉಪದೇಶಗಳನ್ನು ಅರಿಯಿರಿ

Lord Krishna's birthday
ಗಂಗಾವತಿ ತಾಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು. ಶೈಕ್ಷಣಿಕ ನಿರ್ದೇಶಕಿ ಎಸ್. ಕೃಷ್ಣವೇಣಿ, ಪ್ರಾಥಮಿಕ ವಿಭಾಗದ ಶೈಕ್ಷಣಿಕ ಮುಖ್ಯಸ್ಥೆ ಜೆ.ಲಕ್ಷ್ಮೀ, ಕ್ಯಾಂಪಸ್ ಉಸ್ತುವಾರಿ ನಾಗೇಶ ಇತರರಿದ್ದರು.
Published on

ಗಂಗಾವತಿ: ಭಗವಾನ್ ಶ್ರೀಕಷ್ಣನ ನಾಮಸ್ಮರಣೆ ಮಾಡಬೇಕಿದ್ದು, ಉಪದೇಶಗಳನ್ನು ಅರಿಯಬೇಕಿದೆ ಎಂದು ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನೆಕ್ಕಂಟಿ ಸೂರಿಬಾಬು ಹೇಳಿದರು.

ತಾಲೂಕಿನ ಶ್ರೀರಾಮನಗರದ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳು ಕೃಷ್ಣ-ಸುಧಾಮನ ಸ್ನೇಹ, ತಾಯಿ ವಾತ್ಸಲ್ಯ, ಮಮತೆ, ಯುಕ್ತಿ, ಶಕ್ತಿ, ಭಕ್ತಿ ಹಾಗೂ ಪ್ರೀತಿಯ ಗುಣಗಳನ್ನು ಅಳವಡಿಸಿಕೊಂಡು ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು. ವಿದ್ಯಾರ್ಥಿಗಳು ಕೃಷ್ಣ ಮತ್ತು ರಾಧೆಯ ವೇಷ ಧರಿಸಿ ಶ್ರೀಕೃಷ್ಣನ ಉಪದೇಶಗಳ ನತ್ಯ-ರೂಪಕಗಳನ್ನು ಪ್ರದರ್ಶಿಸಿದರು.

ಸಮಾಜಕ್ಕೆ ಸಂದೇಶ ಸಾರುವ ಗೀತೆ ಗಾಯನ, ವಿವಿಧ ವಿನೋದಾವಳಿಗಳನ್ನು ಅನುಕರಿಸಿದರು. ಶೈಕ್ಷಣಿಕ ನಿರ್ದೇಶಕಿ ಎಸ್.ಕೃಷ್ಣವೇಣಿ, ಪ್ರಾಥಮಿಕ ವಿಭಾಗದ ಶೈಕ್ಷಣಿಕ ಮುಖ್ಯಸ್ಥೆ ಜೆ.ಲಕ್ಷ್ಮೀ, ಕ್ಯಾಂಪಸ್ ಉಸ್ತುವಾರಿ ನಾಗೇಶ, ಕಾರ್ಯದರ್ಶಿ ಮಂಜುನಾಥ, ಪಿಆರ್‌ಎಂ ನಿಂಗಪ್ಪ, ಶಿಕ್ಷಕರು, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net