ಪಿಂಚಣಿ ಯೋಜನೆ ಜಾರಿಗೊಳಿಸಲಿ

protest
ಗಂಗಾವತಿ ಎಲ್‌ಐಸಿ ಕಚೇರಿ ಆವರಣದಲ್ಲಿ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘದ ತಾಲೂಕು ಸಮಿತಿ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು. ಸಮಿತಿ ಅಧ್ಯಕ್ಷ ಕೆ.ಎಂ.ಮಂಜುನಾಥ, ಪದಾಧಿಕಾರಿಗಳಾದ ಎಂ.ನಿರುಪಾದಿ ಬೆಣಕಲ್, ಹುಸೇನಬಾಷಾ, ರಾಘವೇಂದ್ರ ಇತರರಿದ್ದರು.
Published on

ಗಂಗಾವತಿ: ಪಿಂಚಣಿ, ವಿಮೆ ಇತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ಎಲ್‌ಐಸಿ ಕಚೇರಿ ಆವರಣದಲ್ಲಿ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಸಂಘದ ತಾಲೂಕು ಸಮಿತಿ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು.

ಸಮಿತಿ ಅಧ್ಯಕ್ಷ ಕೆ.ಎಂ.ಮಂಜುನಾಥ ಮಾತನಾಡಿ, ವಿಮೆ ಪ್ರತಿನಿಧಿಗಳ ಕ್ಷೇಮಕ್ಕಾಗಿ ಕಲ್ಯಾಣ ನಿಧಿ ಸ್ಥಾಪಿಸುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. 25ಲಕ್ಷ ಗುಂಪು ವಿವೆ ಜತೆಗೆ ಪಿಂಚಣಿ ಯೋಜನೆಗಳನ್ನು ಜಾರಿಗೊಳಿಸಬೇಕಿದೆ. ವಿವಿಧ ಕಾರಣಕ್ಕೆ ಅಮಾನತುಗೊಂಡ ಪ್ರತಿನಿಧಿಗಳ ತನಿಖೆ ಪೂರ್ಣಗೊಳಿಸಿ, ಸಂಬಂಧಪಟ್ಟ ಕಮಿಷನ್ ಸೇರಿ ಇತರ ಸೌಲಭ್ಯ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು.

ಪದಾಧಿಕಾರಿಗಳಾದ ಎಂ.ನಿರುಪಾದಿ ಬೆಣಕಲ್, ಕೆ.ನಿಂಗಜ್ಜ, ಹುಸೇನ್‌ಬಾಷಾ, ರಾಘವೇಂದ್ರ, ಎಚ್.ಈಶ್ವರ, ಪಂಪಾಪತಿ ಪಟ್ಟಣಶೆಟ್ಟಿ, ವಲಿಮೋಹಿಯುದ್ದೀನ್, ರಾಘವೇಂದ್ರ, ಭಾರತಿ ಆಗಲೂರು, ರಾಮಾಂಜಿನೇಯ, ಪದ್ಮನಾಭ, ವಿಜಯ್, ಶರಣಪ್ಪ, ಹೊಳಿಯಪ್ಪ, ಹುಸೇನ್, ಶರಣೇಗೌಡ, ವೀರನಗೌಡ, ಬಸವರಾಜ, ವೀರೇಶ ಕಂಬ್ಳಿ, ನಿಜಲಿಂಗಪ್ಪ, ವಿರೂಪಾಕ್ಷಗೌಡ, ವೆಂಕಟೇಶ, ವಿಮಾ ನೌಕರರ ಸಂಘದ ಪ್ರತಿನಿಧಿಗಳಾದ ನರೇಶ, ಹನುಮಂತ, ರಾಮಣ್ಣ ಕುರಿ, ತಬರೀಶ, ಅಭಿವೃದ್ಧಿ ಅಧಿಕಾರಿಗಳಾದ ಕೆ.ಣಿರಾಜ್, ಗುರುಪ್ರಸಾದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net