

ಗಂಗಾವತಿ: ಕಾರ್ಮಿಕ ವಿರೋಧಿ ಕಾಯ್ದೆ ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ಕಾರ್ಮಿಕ ಹಕ್ಕುಗಳನ್ನು ಮೊಟಕುಗೊಳಿಸುತ್ತಿದೆ ಎಂದು ಸಿಐಟಿಯು ಅಧ್ಯಕ್ಷೆ ಎಸ್.ವರಲಕ್ಷ್ಮೀ ಹೇಳಿದರು.
ನಗರದ ಚನ್ನಬಸವ ಸ್ವಾಮಿ ಕಲಾ ಮಂದಿರದಲ್ಲಿ ಸಿಐಟಿಯು ಜಿಲ್ಲಾ ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ಕಾರ್ಮಿಕ ದಿನಾಚರಣೆಯಲ್ಲಿ ಮಾತನಾಡಿದರು. ದೇಶದ 41 ಕೋಟಿ ಕಾರ್ಮಿಕರಲ್ಲಿ 11 ಕೋಟಿ ಕಾರ್ಮಿಕರು ಮಾತ್ರ ಸಂಘಟನೆಯಲ್ಲಿದ್ದು, ಉಳಿದವರಿಗೆ ಸಂಘಟನೆ ಗೊತ್ತಿಲ್ಲ. ಕೇಂದ್ರದ ಕಾರ್ಮಿಕ ವಿರೋಧಿ ನೀತಿಯಿಂದ ಸಂಘಟನೆಗಳು ಹಕ್ಕುಗಳಿಗಾಗಿ ಹೋರಾಟ ಮಾಡುವಂತಿಲ್ಲ. ಕನಿಷ್ಠ ವೇತನಕ್ಕೂ ಕುತ್ತು ತಂದಿದ್ದು, ದಿನಕ್ಕೆ 600ರೂ. ಕೇಳಿದರೆ 187 ರೂ. ನೀಡುವ ಕಾಯ್ದೆ ಜಾರಿಗೆ ತರುತ್ತಿದೆ. ಕಾರ್ಮಿಕ ಕಲ್ಯಾಣ ಮಂಡಳಿ ಅಸ್ತಿತ್ವಕ್ಕೆ ತಂದರೂ ನಯಾಪೈಸೆ ಮೀಸಲಿಡುತ್ತಿಲ್ಲ. ಕಾರ್ಮಿಕರ ಸ್ಥಿತಿ ಶೋಚನೀಯವಾಗಿದ್ದು, ಹಕ್ಕುಗಳಿಗಾಗಿ ಸಂಘಟಿತರಾಗಬೇಕಿದೆ ಎಂದರು.
ಜಿಲ್ಲಾಧ್ಯಕ್ಷ ನಿರುಪಾದಿ ಬೆಣಕಲ್ ಮಾತನಾಡಿ, ಕೃಷಿ ಮತ್ತು ಕಾರ್ಮಿಕ ವಿರೋಧಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕಾರ್ಮಿಕರ ಹಕ್ಕುಗಳು ದೊರೆಯುತ್ತಿಲ್ಲ. ಸೌಲಭ್ಯಗಳನ್ನು ಪಡೆಯಲು ಹೋರಾಟವೊಂದೇ ಅಸ ಎಂದರು.
ಇದಕ್ಕೂ ಮೊದಲು ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಬಹಿರಂಗ ಅಧಿವೇಶನ ನಡೆಸಿದ ಸಂಘಟನೆ ಪದಾಧಿಕಾರಿಗಳು, ಗಂಗಾವತಿಯಲ್ಲಿ ಸಮಾರೋಪಗೊಳಿಸಿದರು. ತಾಲೂಕು ಕಾರ್ಯದರ್ಶಿ ಮಂಜುನಾಥ ಡಗ್ಗಿ, ವಿವಿಧ ಸಂಘಟನೆ ಪದಾಧಿಕಾರಿಗಳಾದ ಲಕ್ಷ್ಮೀದೇವಿ ಸೋನಾರ್, ರಮೇಶ, ರವಿ, ಹನುಮಂತಪ್ಪ ಜಿ. ಹುಲಿಗೆಮ್ಮ, ಕೃಷ್ಣಪ್ಪ ಇತರರಿದ್ದರು.
ಹಿರೇಜಂತಕಲ್: ಇಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂದೆ ವಿಶ್ವ ಕಾರ್ಮಿಕ ದಿನ ಆಚರಿಸಲಾಯಿತು. ಕಾರ್ಮಿಕ ಇಲಾಖೆಯ ಸಲಕರಣೆಗಳ ಕಿಟ್‌ಗಳನ್ನು ವಿತರಿಸಿದ ಜೈ ಭೀಮ್ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಗೋಟೂರು ಮಾತನಾಡಿ, ಕಾರ್ಮಿಕ ಕಲ್ಯಾಣಕ್ಕಾಗಿ ಸರ್ಕಾರ ಯೋಜನೆ ರೂಪಿಸಬೇಕಿದ್ದು, ಹೆಚ್ಚಿನ ಸೌಲಭ್ಯ ಒದಗಿಸಬೇಕು ಎಂದರು.
ಕಾರ್ಮಿಕರ ಕೊಡುಗೆ ಮತ್ತು ಸಂಕಷ್ಟಗಳ ಕುರಿತು ಉಪಾಧ್ಯಕ್ಷ ಮಂಜುನಾಥ ಹಂಚಿನಾಳ್ ಮಾತನಾಡಿದರು. ಮುಖಂಡರಾದ ರಮೇಶ ಮಾಗಿ, ಚಿನ್ನಪ್ಪ, ಜಗದೀಶ, ರಾಮು ಕಿರಿಕಿರಿ, ವೀರೇಶ ಮೀನಗಾರ್, ಸೋಮನಾಥ ಕಂಠಿ, ಹನುಮಂತ, ಪಂಪಣ್ಣ, ಸತ್ಯಪ್ಪ ಚನ್ನಳ್ಳಿ, ಬಸವರಾಜ, ಸಾವಿತ್ರಮ್ಮ, ಮಾಗಿ ವೀರೇಶ ಇತರರಿದ್ದರು.
ಕ್ರಾಂತಿ ಚಕ್ರ ಬಳಗದ ಕಚೇರಿ: ನಗರದ ಕ್ರಾಂತಿ ಚಕ್ರ ಬಳಗದ ಕಚೇರಿಯಲ್ಲಿ ಜಿಲ್ಲಾ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಸಂಘದಿಂದ ಬಸವ ಜಯಂತಿ ಮತ್ತು ವಿಶ್ವ ಕಾರ್ಮಿಕ ದಿನ ಆಚರಿಸಲಾಯಿತು. ಕಾರ್ಮಿಕ ಸಂಘಟನೆ ಅಗತ್ಯತೆ, ಹಕ್ಕುಗಳು ಮತ್ತು ಹೋರಾಟ ಕುರಿತು ಕ್ರಾಂತಿಚಕ್ರ ಬಳಗದ ಅಧ್ಯಕ್ಷ ಜೆ.ಭಾರಧ್ವಾಜ್ ಮಾತನಾಡಿದರು. ಸಂಘದ ಗೌರವ ಸಲಹೆಗಾರ ಶೇಖರಗೌಡ ಮಾಲಿಪಾಟೀಲ್, ಮುಖಂಡರಾದ ಸಿರಾಜ್ ಸಿದ್ದಾಪುರ, ದುರುಗೇಶ, ಸಂಘದ ಪದಾಧಿಕಾರಿಗಳಾದ ಜಗದೀಶ, ಸೈಯದ್ ಯೂಸ್ೂ, ಅನ್ವರ್, ರಸೂಲ್, ಗೌಸ್, ಮಹೆಬೂಬ, ದೌಲತ್, ರಾಜಾವಲಿ, ಯಾಜ್ ಸರ್ಜಿದಾರ್ ಇತರರಿದ್ದರು.