

ಗಂಗಾವತಿ: ನಗರದ ಐತಿಹಾಸಿಕ ಶ್ರೀ ಈರಣ್ಣ ದೇವರ ದೇವಸ್ಥಾನದ 31ನೇ ವರ್ಷದ ಕುಂಭೋತ್ಸವ ಗುರುವಾರ ಜರುಗಿತು.
ಶ್ರೀ ಕೊಟ್ಟೂರು ಬಸವೇಶ್ವರ ದೇವಾಲಯದಿಂದ ಶ್ರೀ ಈರಣ್ಣ ದೇವರ ದೇವಾಲಯವರೆಗೆ 108 ಕುಂಭದೊಂದಿಗೆ ಮೂರ್ತಿ ಮೆರವಣಿಗೆ ಜರುಗಿದ್ದು, ಪುರವಂತ ನಾಗರಾಜ ಪರಗಿ ನೇತೃತ್ವದ ತಂಡದಿಂದ ಖಡ್ಗಮೇಳ, ವೀರಗಾಸೆ ಪುರವಂತಿಕೆ ನಡೆಯಿತು. ಇದೇ ಸಂದರ್ಭದಲ್ಲಿ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀ ಗಣೇಶ, ಈರಣ್ಣ, ವೀರಭದ್ರೇಶ್ವರ ಮೂರ್ತಿಗಳ 9ನೇ ವರ್ಷದ ಪ್ರತಿಷ್ಠಾಪನೆ ವಾರ್ಷಿಕೋತ್ಸವ ನೆರವೇರಿತು.
ನಂತರ ದೇವಾಲಯದಲ್ಲಿ ರುದ್ರಾಭಿಷೇಕ, ಕುಂಭಾಭಿಷೇಕ, ಬಿಲ್ವಾರ್ಚನೆ, ಭಜನೆ ಮತ್ತು ಪ್ರಸಾದ ವಿತರಣೆ ಜರುಗಿತು. ಅರಳಹಳ್ಳಿ ಮಠದ ಗವಿಸಿದ್ದಯ್ಯ ಸ್ವಾಮೀಜಿ, ಸುಳೇಕಲ್ ಬೃಹನ್ಮಠದ ಪದ್ಮಾಕ್ಷರಯ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ದೇವಾಲಯ ಸಮಿತಿ ಪದಾಧಿಕಾರಿಗಳಾದ ಶರಣಪ್ಪ ಓಲಿ, ಕೊಟ್ರಪ್ಪ ಅಕ್ಕಿ, ಪಂಪಾಪತಿ ಹುರಕಡ್ಲಿ, ಮಹಾಂತೇಶ ಶಾಸಿಮಠ, ಅಕ್ಕಿ ಶಿವಪ್ರಕಾಶ, ಮಂಜುನಾಥ ಈಡಿಗೇರ, ಕವಿತಾ ಗುರುಮೂರ್ತಿ, ದೊಡ್ಡಬಸಮ್ಮ ಗುರುವಿನಮಠ ಇತರರಿದ್ದರು.