ಸಂವಿಧಾನದಿಂದ ಸಾಧನೆ ಮಾಡಲು ಸಾಧ್ಯ

Untitled design (27)
Published on

ಗಂಗಾವತಿ: ಮಾನವೀಯ ನೆಲೆಗಳ ಹಿನ್ನೆಲೆಯಲ್ಲಿ ಸಂವಿಧಾನ ರೂಪುಗೊಂಡಿದ್ದು, ಪರಿಪೂರ್ಣ ಬದುಕು ಸಾಗಿಸಲು ಬೇಕಾದ ಹಕ್ಕುಗಳನ್ನು ನೀಡಿದೆ ಎಂದು ಕೆಸಿಎಸ್ ಮಹಿಳಾ ಪದವಿ ಕಾಲೇಜಿನ ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ್ ಹೇಳಿದರು.

ನಗರದ ಕೆಸಿಎಸ್ ಮಹಿಳಾ ಪದವಿ ಕಾಲೇಜಿನಲ್ಲಿ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘ ಮತ್ತು ಅಜೀಂ ಪ್ರೇಂಜೀ ೌಂಡೇಷನ್ ಸಹಯೋಗದೊಂದಿಗೆ ಬುಧವಾರ ಹಮ್ಮಿಕೊಂಡಿದ್ದ ಸಂವಿಧಾನಿಕ ಮೌಲ್ಯಗಳು ಕುರಿತು ಎರಡು ದಿನಗಳ ಕಾರ್ಯಾಗಾರದ ಸಮಾರೋಪದಲ್ಲಿ ಮಾತನಾಡಿದರು.

ಒಬ್ಬ ವ್ಯಕ್ತಿ ಸಮಾಜದಲ್ಲಿ ಹೆಮ್ಮೆಯಿಂದ ಬಾಳುವಂತ ಹಕ್ಕುಗಳನ್ನು ಸಂವಿಧಾನ ನೀಡಿದ್ದು, ಅವುಗಳ ಅರಿವು ಮತ್ತು ಕರ್ತವ್ಯ ಪ್ರಜ್ಞೆಯ ಮೂಲಕ ಶ್ರೇಷ್ಠ ನಾಗರಿಕರಾಗಿ ಬಾಳಬೇಕಿದೆ. ಸಂವಿಧಾನದಿಂದಲೇ ಎಲ್ಲ ರೀತಿಯ ಸೌಲಭ್ಯ ಪಡೆಯಲು ಮತ್ತು ಸಾಧನೆ ಮಾಡಲು ಸಾಧ್ಯವಾಗಿದೆ ಎಂದರು.

ವಿವಿಧ ಚಟುವಟಿಕೆಗಳ ಮೂಲಕ ಸಂವಿಧಾನದ ಮಹತ್ವವನ್ನು ೌಂಡೇಷನ್ ಸಂಪನ್ಮೂಲ ವ್ಯಕ್ತಿಗಳಾದ ಸತೀಶ್, ಹಮೀದ್, ಭರತೇಶ, ಉಮೇಶ ಮತ್ತು ಸವಿತಾ ಮಾಹಿತಿ ನೀಡಿದರು. ಗುಂಪು ಚರ್ಚೆ, ಭಾಷಣ ವಿಚಾರ ವಿನಿಮಯ ಮುಂತಾದ ಪ್ರಕ್ರಿಯೆ ಆಯೋಜಿಸಿದ್ದು, ವಿದ್ಯಾರ್ಥಿನಿಯರ ಮನೋವಿಕಾಸಕ್ಕೆ ಕಾರಣವಾಯಿತು.ನಂತರ ವಿದ್ಯಾರ್ಥಿನಿಯರು ಅಭಿಪ್ರಾಯ ವ್ಯಕ್ತಪಡಿಸಿದರು. ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು ಉಪನ್ಯಾಸಕರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net