ಬೆಥೆಲ್ ಕಾಲೇಜಿನ 25 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ

SPORTS
ಕೊಪ್ಪಳದಲ್ಲಿ ಆಯೋಜಿಸಿದ್ದ ಜಿಲ್ಲಾಮಟ್ಟದ ಪ.ಪೂ.ಕಾಲೇಜುಗಳ ಕ್ರೀಡಾಕೂಟದಲ್ಲಿ ಗಂಗಾವತಿ ಬೆಥೆಲ್ ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಪಡೆದುಕೊಂಡರು. ಖಜಾಂಚಿ ಸುಜಾತಾ ರಾಜು, ಪ್ರಾಚಾರ್ಯ ಬಿಂಗಿ ವೆಂಕಟೇಶ, ಸಹ ಪ್ರಾಚಾರ್ಯ ಕೆ.ಹನುಮಂತಪ್ಪ, ತರಬೇತುದಾರ ಬಾಬುಸಾಬ್ ಇತರರಿದ್ದರು.
Published on

ಗಂಗಾವತಿ: ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಶಿಕ್ಷಣ ಇಲಾಖೆ (ಪಿಯು)ಮತ್ತು ಗವಿಸಿದ್ಧೇಶ್ವರ ಪಿಯು ಕಾಲೇಜು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ.ಪೂ. ಕಾಲೇಜುಗಳ ಕ್ರೀಡಾಕೂಟದಲ್ಲಿ ನಗರದ ಬೆಥೆಲ್ ಸ್ವತಂತ್ರ ಪಿಯು ಕಾಲೇಜಿನ 25 ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಕರಾಟೆ, ಕುಸ್ತಿ, ಜೂಡೋ, ಬಾಕ್ಸಿಂಗ್, ಟೆಕ್ವಾಂಡೋ, ಜಂಪ್‌ರೋಪ್ ಮತ್ತು ಈಜು ಕ್ರೀಡೆಗಳಲ್ಲಿ ತೂಕ ಮತ್ತು ವಯೋಮಿತಿ ಆಧಾರದಲ್ಲಿ ಕಾಲೇಜಿನ ಎಂಟು ವಿದ್ಯಾರ್ಥಿಗಳು ಮೂರು ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಆಫ್ರಿದ್, ಅಜಯ್ ಕುಮಾರ್, ಭೀಮರಾಯ್, ಶ್ರೀಕಾಂತ್, ವಿನಾಯಕ, ಮಹೇಶ್, ನಾಗಪ್ಪ, ಪಥ್ವಿರಾಜ್, ರೇಖಾ, ಆಶಾ, ಸಂಜನಾ, ಸುಧಾ, ಸಾವಿತ್ರಿ, ದೇವಮ್ಮ, ಹುಲಿಗೆಮ್ಮ, ಸಾನಿಯಾಮಿರ್ಜಾ, ಅಮೂಲ್ಯಾ, ಮಾಲನ್ ಮತ್ತು ೌಜಿಯಾ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಆಡಳಿತಾಧಿಕಾರಿ ಹೇಮಾ ಸುಧಾಕರ ತಿಳಿಸಿದ್ದಾರೆ.

ಅಧ್ಯಕ್ಷ ಜೋಸ್ೆ ರಾಜು, ಕಾರ್ಯದರ್ಶಿ ಬ್ಯಾಬೇಜ್ ಮಿಲ್ಟನ್, ಖಜಾಂಚಿ ಸುಜಾತಾ ರಾಜು, ಪ್ರಾಚಾರ್ಯ ಬಿಂಗಿ ವೆಂಕಟೇಶ, ಸಹ ಪ್ರಾಚಾರ್ಯ ಕೆ.ಹನುಮಂತಪ್ಪ, ತರಬೇತುದಾರ ಬಾಬುಸಾಬ್, ದೈಹಿಕ ಶಿಕ್ಷಣ ಶಿಕ್ಷಕ ಆನಂದ್ ರಾಥೋಡ್, ವ್ಯವಸ್ಥಾಪಕಿ ಶ್ರೀದೇವಿ ಇತರರಿದ್ದರು.

ವಸತಿ ಶಾಲೆಗೆ ಸಮಗ್ರ ಪ್ರಶಸ್ತಿ: ತಾಲೂಕಿನ ಮಲಕನಮರಡಿಯ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ವಿದ್ಯಾರ್ಥಿಗಳೂ ಸಹ ಜಿಲ್ಲಾಮಟ್ಟದ ಪ್ರೌಢ ಶಾಲೆಗಳ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರೌಢ ವಿಭಾಗದ ಚೆಸ್‌ನಲ್ಲಿ ಬಿ.ಅನುಷಾ, ವೈಶಾಲಿ, ಟೇಬಲ್ ಟೆನ್ನಿಸ್‌ನಲ್ಲಿ ವೈಷ್ಣವಿ, ರೇಣುಕಾ, ಬಿ.ಅನುಷಾ, ಮಹಾಲಕ್ಷ್ಮೀ ಕುಮಾರಿ, ಚೈತನ್ಯಾ ಹಾಗೂ ಪ್ರಾಥಮಿಕ ವಿಭಾಗದ 100 ಮೀ.ಓಟದಲ್ಲಿ ಶಾರದಾ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಪ್ರಾಚಾರ್ಯ ಮಲ್ಲಿಕಾರ್ಜುನ ಪಾಟೀಲ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net