ಅಪಘಾತ ರಹಿತ ಚಾಲನೆ ಆದ್ಯತೆಯಾಗಲಿ

Driver's Day
ಗಂಗಾವತಿ ಕೆಕೆಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಚಾಲಕರ ದಿನ ಕಾರ್ಯಕ್ರಮದಲ್ಲಿ ವರ್ಷದಲ್ಲಿ 300ಕ್ಕೂ ಹೆಚ್ಚು ದಿನ ಕೆಲಸ ಮಾಡಿದ ಚಾಲಕರಿಗೆ ಶುಕ್ರವಾರ ಪ್ರಮಾಣ ಪತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು. ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್, ನಗರ ಪಿಐ ಪ್ರಕಾಶ ಮಾಳೆ, ಸಂಚಾರ ನಿಯಂತ್ರಕರಾದ ಸಂಜೀವಮೂರ್ತಿ, ಶಿವನಗೌಡ ಇತರರಿದ್ದರು.
Published on

ಗಂಗಾವತಿ: ನಗರದ ಕೆಕೆಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಸ್ಥಳೀಯ ಘಟಕದಿಂದ ಚಾಲಕರ ದಿನ ಶುಕ್ರವಾರ ಆಚರಿಸಲಾಯಿತು.

ಪ್ರಯಾಣಿಕರ ಸುರಕ್ಷತೆ, ಚಾಲನೆ ಜವಾಬ್ದಾರಿ, ವಿಧೇಯತೆ ಮತ್ತು ಸಂಸ್ಥೆ ಅಭಿವೃದ್ಧಿಗೆ ಸಿಬ್ಬಂದಿ ಪಾತ್ರ ಕುರಿತು ಚಾಲಕ ಮತ್ತು ನಿರ್ವಾಹಕರಿಗೆ ಮಾಹಿತಿ ನೀಡಲಾಯಿತು. ಅಪಘಾತ ರಹಿತ ಚಾಲನೆ ಮತ್ತು ಪ್ರಯಾಣಿಕರೊಂದಿಗೆ ಸಿಬ್ಬಂದಿ ಸೌಜನ್ಯದಿಂದ ವರ್ತಿಸುವಂತೆ ಘಟಕದ ವ್ಯವಸ್ಥಾಪಕ ರಾಜಶೇಖರ್ ಸಿಂಧೂರ ಸಲಹೆ ನೀಡಿದರು. ವರ್ಷದಲ್ಲಿ 300ಕ್ಕಿಂತ ಹೆಚ್ಚು ದಿನ ಕೆಲಸ ಮಾಡಿದ ಸಿಬ್ಬಂದಿ ದ್ಯಾಮಣ್ಣ, ಶಿವನಗೌಡ, ಯಲ್ಲಪ್ಪ, ಚನ್ನಪ್ಪ, ಜಾರ್, ಶರಣಪ್ಪ, ಕೆ.ಗೋಪಾಲ, ಅಮರೇಶ, ಸಂಜೀವರಾಜ್, ಮರಿಯಪ್ಪಗೆ ಪ್ರಮಾಣ ಪತ್ರ ಮತ್ತು ನಗದು ಬಹುಮಾನ ನೀಡಿ ಗೌರವಿಸಲಾಯಿತು.

ವಿಶೇಷ ಆಹ್ವಾನಿತ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಪಾಟೀಲ್ ಮಾತನಾಡಿ, ಸಂಸ್ಥೆ ಬೆಳವಣಿಗೆಯಲ್ಲಿ ಸಿಬ್ಬಂದಿ ಪಾತ್ರ ಪ್ರಮುಖವಾಗಿದ್ದು, ನಿಸ್ವಾರ್ಥದಿಂದ ಕರ್ತವ್ಯ ನಿರ್ವಹಿಸಬೇಕು. ಸಂಚಾರ ನಿಯಮಾವಳಿಯೊಂದಿಗೆ ಪ್ರಯಾಣಿಕರ ಸುರಕ್ಷತೆಯತ್ತ ಗಮನಹರಿಸಬೇಕು. ಮುಂಜಾಗ್ರತೆ ಕ್ರಮ ಕಡ್ಡಾಯ ಪಾಲಿಸುವಂತೆ ಸಲಹೆ ನೀಡಿದರು. ನಗರ ಪಿಐ ಪ್ರಕಾಶ ಮಾಳೆ, ಸಂಚಾರ ನಿಯಂತ್ರಕರಾದ ಸಂಜೀವಮೂರ್ತಿ, ಶಿವನಗೌಡ, ಸಂಚಾರ ಪಿಎಸೈ ಶಾರದಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net