ಜುಲೈ ಅಂತ್ಯದೊಳಗೆ ಕೇಂದ್ರೀಯ ವಿದ್ಯಾಲಯ ಕಾಮಗಾರಿ ಪೂರ್ಣ: ಸಂಸದ ಸಂಗಣ್ಣ ಕರಡಿ ಹೇಳಿಕೆ

19062022 Gangava Sanganna Karadi visit to Central School
Published on

ಗಂಗಾವತಿ: ಇಲ್ಲಿನ ಸಾಯಿನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೇಂದ್ರೀಯ ವಿದ್ಯಾಲಯದ ಕಟ್ಟಡ ಕಾಮಗಾರಿಯನ್ನು ಸಂಸದ ಕರಡಿ ಸಂಗಣ್ಣ ಭಾನುವಾರ ಪರಿಶೀಲಿಸಿದರು.

ಬಿಜೆಪಿ ಆಡಳಿತಾವಧಿಯಲ್ಲಿ ನಗರಕ್ಕೆ ಕೇಂದ್ರೀಯ ವಿದ್ಯಾಲಯ ಮಂಜೂರಾಗಿದ್ದು, ಸ.ನಂ.56ರಲ್ಲಿ 8 ಎಕರೆ ಜಮೀನು ನೀಡಲಾಗಿದೆ. 6 ಎಕರೆಯಲ್ಲಿ ಭೌತಿಕ ಕಟ್ಟಡ ನಿರ್ಮಾಣವಾಗುತ್ತಿದ್ದು, ಕೇಂದ್ರ ಸರ್ಕಾರ 25 ಕೋಟಿ ರೂ. ಅನುದಾನ ನೀಡಿದೆ. ಶೇ.80 ಕಾಮಗಾರಿ ಪೂರ್ಣಗೊಂಡಿದೆ. ತರಗತಿ ಕೊಠಡಿ, ಹೊರಾಂಗಣ, ಒಳಾಂಗಣ ಕ್ರೀಡಾಂಗಣ, ಮಿನಿ ಆಡಿಟೋರಿಯಂ, ಸಿಬ್ಬಂದಿ ವಸತಿ ಗೃಹ ಸೇರಿ ಎಲ್ಲ ಸೌಲಭ್ಯ ಒಳಗೊಂಡಿದ್ದು, ಜುಲೈ ಅಂತ್ಯದೊಳಗೆ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು. ಶಾಸಕ ಪರಣ್ಣಮುನವಳ್ಳಿ, ಕಾಡಾ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಕಾಶಿನಾಥ ಚಿತ್ರಗಾರ, ಗ್ರಾಮೀಣ ಮಂಡಲ ಅಧ್ಯಕ್ಷ ಚನ್ನಪ್ಪ ಮಳಗಿ, ಮುಖಂಡ ರಘುರಾಂ ರೆಡ್ಡಿ, ಇಂಜಿನಿಯರ್ ರಾಜಶೇಖರ್ ಇತರರಿದ್ದರು.

ಕಳೆ ಮೂರು ವರ್ಷದಿಂದ ವಿದ್ಯಾಲಯ ನಗರದ ಎಂಎನ್‌ಎಂ ಬಾಲಕಿಯರ ಪಪೂ ಕಾಲೇಜಿನಲ್ಲಿ ನಡೆಯುತ್ತಿದೆ. ಹೊಸ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಆಗಸ್ಟ್‌ನಲ್ಲಿ ಸ್ಥಳಾಂತರಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net