ನಾಡಿನ ಚಿಂತನೆಗೆ ಸಮ್ಮೇಳನಗಳು ಸಹಕಾರಿ

Foundation Day
ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಸಾಪ ಸಂಸ್ಥಾಪನೆ ದಿನ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಪ್ರಾಚಾರ್ಯೆ ಡಾ.ಕೆ.ಎಸ್.ಶೋಭಾ ಸೋಮವಾರ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಶಾಂತಪ್ಪ, ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ. ಪಾಟೀಲ್, ತಾಲೂಕಾಧ್ಯಕ್ಷ ಎಂ.ರುದ್ರೇಶ ಅರಾಳ್ ಇತರರಿದ್ದರು.
Published on

ಗಂಗಾವತಿ: ಸಮ್ಮೇಳನಗಳು ನಾಡು, ನುಡಿ ಕುರಿತು ಚಿಂತನೆ ನಡೆಸುವ ಪ್ರಕ್ರಿಯೆಗಳಾಗಿದ್ದು, ಇವುಗಳ ಮೂಲಕ ಕಸಾಪ ಕೇಂದ್ರ ಸಂಸ್ಥೆ ಕನ್ನಡಿಗರನ್ನು ಒಗ್ಗೂಡಿಸುತ್ತಿದೆ ಎಂದು ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ.ತಾತಪ್ಪ ಹೇಳಿದರು.

ತಾಲೂಕಿನ ಶ್ರೀರಾಮನಗರದ ಸಿಎನ್‌ಆರ್ ಸರ್ಕಾರಿ ಪದವಿ ಕಾಲೇಜಿನಲ್ಲಿ ಕಸಾಪ ಜಿಲ್ಲಾ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ಕಸಾಪ ಸಂಸ್ಥಾಪನೆ ದಿನ ಮತ್ತು ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಶತಮಾನೋತ್ಸವ ಆಚರಿಸಿಕೊಂಡ ಕಸಾಪದಿಂದ ಸಾಹಿತ್ಯ ಪೂರಕ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ರಾಜ್ಯ ಏಕೀಕರಣ ಮತ್ತು ನಾಮಕರಣಕ್ಕೆ ಕಸಾಪ ಕೊಡುಗೆ ಸಾಕಷ್ಟಿದೆ. ಕನ್ನಡಿಗರು ಒಂದಾಗಿ ಸೇರುವ ಮಹತ್ವದ ತಾಣವಾದ ಸಮ್ಮೇಳನಗಳು ಕನ್ನಡ ಮನಸ್ಸುಗಳನ್ನು ಗಟ್ಟಿಗೊಳಿಸುತ್ತಿವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಾಚಾರ್ಯೆ ಡಾ.ಕೆ.ಎಸ್.ಶೋಭಾ ಮಾತನಾಡಿ, ಕನ್ನಡ ಭಾಷೆ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಕ್ರೀಯಾಶೀಲ ಕಾರ್ಯಕ್ರಮಗಳಾಗಬೇಕಿದ್ದು, ಕನ್ನಡ ಪ್ರತಿಯೊಬ್ಬರ ಉಸಿರಾಗಬೇಕಿದೆ ಎಂದರು.

ದತ್ತಿ ಉಪನ್ಯಾಸ ಮಾಲಿಕೆಯಲ್ಲಿ ಆನೆಗೊಂದಿ ಸ.ಪ್ರೌ.ಶಾಲೆ ಶಿಕ್ಷಕ ಶರಣಪ್ಪ ಕುಂಬಾರ, ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊ.ಪಾಟೀಲ್ ಮಾತನಾಡಿದರು.

ಗ್ರಾಪಂ ಅಧ್ಯಕ್ಷ ಶಾಂತಪ್ಪ, ಸದಸ್ಯ ವೀರರಾಜು, ಮಹೆಬೂಬ್, ಭೂದಾನಿ ಚಿಲಕೂರಿ ರಾಮಕೃಷ್ಣ, ತಾಪಂ ಮಾಜಿ ಅಧ್ಯಕ್ಷ ಮಹ್ಮದ್ ರಫೀ, ಸಹಾಯಕ ಪ್ರಾಧ್ಯಾಪಕ ಡಾ.ಸರ್ರಾಜ್, ಉಪನ್ಯಾಸಕರಾದ ವೆಂಕಟರಾಜು, ದೇವರಾಜ್, ಜಬೀನಾಬೇಗಂ, ವಿನಾಯಕ, ಶಾಂತಮ್ಮ, ಶಶಿಕುಮಾರ, ವಿರೂಪಾಕ್ಷಪ್ಪ, ಶಂಕ್ರಪ್ಪ, ಕಸಾಪ ತಾಲೂಕಾಧ್ಯಕ್ಷ ಎಂ.ರುದ್ರೇಶ ಆರಾಳ್, ಪದಾಧಿಕಾರಿಗಳಾದ ರಮೇಶ್ ಬಾಳಿಕಾಯಿ, ಯಮನೂರಪ್ಪ ಸಿಂಗನಾಳ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net