ನರೇಗಾದಡಿ ಕೂಲಿಗಾರರಿಗೆ ಕೆಲಸ ನೀಡಿ, ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಮನವಿ

PROTEST
ಮನರೇಗಾ ಯೋಜನೆಯಡಿ ಗಂಗಾವತಿ ತಾಲೂಕಿನ ವೆಂಕಟಗಿರಿ ಗ್ರಾಪಂ ವ್ಯಾಪ್ತಿಯ ಕೂಲಿಕಾರರಿಗೆ ಕೆಲಸ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಸದಸ್ಯರು ತಾಪಂ ಇಒ ರಾಮರೆಡ್ಡಿ ಪಾಟೀಲ್‌ಗೆ ಮನವಿ ಸಲ್ಲಿಸಿದರು. ತಾಲೂಕಾಧ್ಯಕ್ಷ ಶಿವಣ್ಣ ಬೆಣಕಲ್, ಕಾರ್ಯದರ್ಶಿ ಶ್ರೀನಿವಾಸ ಹೊಸಳ್ಳಿ, ಪದಾಧಿಕಾರಿಗಳಾದ ಮುತ್ತಣ್ಣ ದಾಸನಾಳ್, ದುರುಗಪ್ಪ ಇತರರಿದ್ದರು.
Published on

ಗಂಗಾವತಿ: ಮನರೇಗಾ ಯೋಜನೆಯಡಿ ತಾಲೂಕಿನ ವೆಂಕಟಗಿರಿ ಗ್ರಾಪಂ ವ್ಯಾಪ್ತಿಯ ಕೂಲಿಕಾರರಿಗೆ ಕೆಲಸ ನೀಡುವಂತೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಸಮಿತಿ ಸದಸ್ಯರು ನಗರದ ತಾಪಂ ಕಚೇರಿ ಮುಂದೆ ಶುಕ್ರವಾರ ಕೂಲಿಕಾರರೊಂದಿಗೆ ಪ್ರತಿಭಟನೆ ನಡೆಸಿ ಇಒ ರಾಮರೆಡ್ಡಿ ಪಾಟೀಲ್‌ಗೆ ಮನವಿ ಸಲ್ಲಿಸಿದರು.

ತಾಲೂಕು ಸಮಿತಿ ಅಧ್ಯಕ್ಷ ಶಿವಣ್ಣ ಬೆಣಕಲ್ ಮಾತನಾಡಿ, ಗುಳೇ ತಪ್ಪಿಸಲು ನರೇಗಾ ಯೋಜನೆ ಜಾರಿಯಲ್ಲಿದ್ದರೂ ಗ್ರಾಪಂ ಸಿಬ್ಬಂದಿ ನಿರ್ಲಕ್ಷ್ಯದಿಂದ ಕೆಲಸ ನೀಡಲಾಗುತ್ತಿಲ್ಲ. ಕೆಲಸಕ್ಕೆ ಅರ್ಜಿ ಹಾಕಿದ ದಾಸನಾಳ ಕೂಲಿಕಾರರಿಗೆ ತಿಂಗಳಿಂದ ಕೆಲಸ ನೀಡದೆ ಕಾಲಹರಣ ಮಾಡಲಾಗುತ್ತಿದ್ದು, ಜೀವನ ನಿರ್ವಹಣೆಗೆ ತೊಂದರೆಯಾಗಿದೆ. ಯೋಜನೆ ಅನುಷ್ಠಾನದಲ್ಲಿ ನಿರ್ಲಕ್ಷ್ಯವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದು, ಕೆಲಸ ನೀಡುವುದರ ಜತೆಗೆ ನಿರುದ್ಯೋಗ ಭತ್ಯೆ ನೀಡುವಂತೆ ಒತ್ತಾಯಿಸಿದರು.

ಕಾರ್ಯದರ್ಶಿ ಶ್ರೀನಿವಾಸ ಹೊಸಳ್ಳಿ, ಪದಾಧಿಕಾರಿಗಳಾದ ಮುತ್ತಣ್ಣ ದಾಸನಾಳ್, ದುರುಗಪ್ಪ, ನಿಂಗಪ್ಪ, ಚಾಂದಬೀ, ನೂರ್‌ಜಾನ್, ಬೆಟ್ಟದಪ್ಪ, ಬಸಪ್ಪ, ಗಾದೆಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net