ಜಮೀನುವಾಸಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ

PROTEST
ಜಮೀನುಗಳಲ್ಲಿ ವಾಸವಿರುವ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಗಂಗಾವತಿ ಜೆಸ್ಕಾಂ ಉಪವಿಭಾಗ ಕಚೇರಿ ಇಇ ರಿಯಾಜ್ ಅಹ್ಮದ್‌ಗೆ ಬುಧವಾರ ಮನವಿ ಸಲ್ಲಿಸಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮುಸ್ತಾ ಪಠಾಣ, ಪದಾಧಿಕಾರಿಗಳಾದ ವೆಂಕಟೇಶ ನಾಯಕ, ಹನುಮಂತಪ್ಪ ಬಂಡ್ರಾಲ್, ಯಮನೂರ ಇತರರಿದ್ದರು.
Published on

ಗಂಗಾವತಿ: ಕನಕಗಿರಿ ಭಾಗದ ಕೆಲ ಗ್ರಾಮಗಳ ಜಮೀನುಗಳಲ್ಲಿ ವಾಸವಿರುವವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ನಗರದ ಜೆಸ್ಕಾಂ ಉಪವಿಭಾಗ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿ ಇಇ ರಿಯಾಜ್ ಅಹ್ಮದ್‌ಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮುಸ್ತಾ ಪಠಾಣ ಮಾತನಾಡಿ, ಕನಕಗರಿ ಭಾಗದ ಹಿರೇಖೇಡ, ಚಿಕ್ಕಖೇಡ, ಸಿರವಾರ, ಗೋಡಿನಾಳ್, ಗುಡದೂರು, ಮಲ್ಲಾಪುರ, ಮಲ್ಲಿಗೆವಾಡ, ನೀರಲೂಟಿ, ಉಮಳಿಕಾಟಾಪುರ, ಕರಡೋಣಿ, ಆಕಳಕುಂಪಿ ಪ್ರದೇಶದ ಕೃಷಿ ಭೂಮಿಯಲ್ಲಿ ವಾಸಿಸುತ್ತಿರುವ ಜನರಿಗೆ ವಿದ್ಯುತ್ ಸಂಪರ್ಕವಿಲ್ಲದಂತಾಗಿದ್ದು, ಕತ್ತಲೆಯಲ್ಲಿ ಜೀವನ ನಡೆಸುವ ಸ್ಥಿತಿ ಬಂದಿದೆ.

ವಿಷ ಜಂತುಗಳ ಕಾಟದಿಂದ ಹಲವು ಕುಟುಂಬಗಳು ರಾತ್ರಿ ಹೊತ್ತಿನಲ್ಲಿ ಹೊರ ಬರಲು ಹಿಂದೇಟು ಹಾಕುತ್ತಿವೆೆ. ಈ ಹಿಂದೆಯೂ ವಿದ್ಯುತ್ ಸಂಪರ್ಕ ಮತ್ತು ವಿದ್ಯುತ್ ಪರಿವರ್ತಕಕ್ಕಾಗಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಒತ್ತಾಯಿಸಿದರು.

ಪದಾಧಿಕಾರಿಗಳಾದ ವೆಂಕಟೇಶ ನಾಯಕ, ಹನುಮಂತಪ್ಪ ಬಂಡ್ರಾಲ್, ಯಮನೂರ, ಬಸನಗೌಡ, ಅಯ್ಯಪ್ಪ, ಶೇಖರಪ್ಪ, ರಮೇಶ, ಶರಣೇಗೌಡ, ಪಿ.ಪಿ.ಶರಣಬಸವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net