ಕ್ಷಮೆ ಕೇಳಲು ಉದ್ಧಟತನ ಸರಿಯಲ್ಲ

is too arrogant to apologize
ನಟ ಕಮಲ್ ಹಾಸನ್ ಅಭಿನಯದ ಚಿತ್ರಗಳ ಪ್ರದರ್ಶನಕ್ಕೆ ರಾಜ್ಯದಲ್ಲಿ ಅವಕಾಶ ನೀಡದಂತೆ ಒತ್ತಾಯಿಸಿ ಕನ್ನಡ ಜಾಗೃತಿ ವೇದಿಕೆ ಜಿಲ್ಲಾ ಸಮಿತಿ ಸದಸ್ಯರು ತಹಸೀಲ್ದಾರ್ ಯು.ನಾಗರಾಜ್‌ಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಸೈಯದ್ ಅಸ್ಲಾಂ, ಪದಾಧಿಕಾರಿಗಳಾದ ಮೊಹಮ್ಮದ್ ಪೀರು, ರಮೇಶ, ರಾಮ ಪ್ರಿನ್ಸ್, ಶೇಕ್ ಅನ್ವರ್ ಇತರರಿದ್ದರು.
Published on

ಗಂಗಾವತಿ: ಕನ್ನಡ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡಿದ ನಟ ಕಮಲ ಹಾಸನ್ ಅಭಿನಯದ ಚಿತ್ರಗಳ ಪ್ರದರ್ಶನಕ್ಕೆ ರಾಜ್ಯದಲ್ಲಿ ಅವಕಾಶ ನೀಡದಂತೆ ಒತ್ತಾಯಿಸಿ ಕನ್ನಡ ಜಾಗೃತಿ ವೇದಿಕೆ ಜಿಲ್ಲಾ ಸಮಿತಿ ಸದಸ್ಯರು ತಹಸಿಲ್ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಯು.ನಾಗರಾಜ್‌ಗೆ ಮನವಿ ಸಲ್ಲಿಸಿದರು.

ಸಮಿತಿ ಜಿಲ್ಲಾಧ್ಯಕ್ಷ ಸೈಯದ್ ಅಸ್ಲಾಂ ಮಾತನಾಡಿ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, 8ಕ್ಕೂ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಶ್ರೇಷ್ಠ ಭಾಷೆ. ಇಂತಹ ಭಾಷೆಯ ಬಗ್ಗೆ ಹಗುರವಾಗಿ ಮಾತನಾಡಿದ್ದಲ್ಲದೇ ಕ್ಷಮೆ ಕೇಳಲ್ಲವೆಂದು ಉದ್ಧಟತನ ಮೆರೆದಿದ್ದಾರೆ.

ಹೀಗಾಗಿ ಕನ್ನಡ ಭಾಷೆಗೆ ಅಗೌರವ ತೋರಿದ ಕಮಲ್ ಹಾಸನ್ ನಟನೆಯ ಯಾವ ಚಿತ್ರವನ್ನೂ ರಾಜ್ಯದಲ್ಲಿ ಬಿಡುಗಡೆ ಮತ್ತು ಪ್ರದರ್ಶನಗೊಳ್ಳಲು ಅವಕಾಶ ನೀಡಲ್ಲ. ಈ ಬಗ್ಗೆ ಚಿತ್ರಮಂದಿರದ ಮಾಲೀಕರು ಗಂಭೀರವಾಗಿ ಪರಿಗಣಿಸಬೇಕಿದ್ದು, ಪ್ರದರ್ಶಿಸಿದರೆ ಮುಂದಾಗುವ ತೊಂದರೆಗಳಿಗೆ ಮಾಲೀಕರೇ ಹೊಣೆಗಾರರು ಎಂದು ಎಚ್ಚರಿಸಿದರು. ಪದಾಧಿಕಾರಿಗಳಾದ ಮೊಹಮ್ಮದ್ ಪೀರು, ರಮೇಶ, ರಾಮ ಪ್ರಿನ್ಸ್, ಶೇಖ್ ಅನ್ವರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net