ಜಗನ್ನಾಥ ದಾಸರ ಚಿತ್ರದಲ್ಲಿ ಸ್ಥಳೀಯರಿಗೆ ಅವಕಾಶ; ನಿರ್ದೇಶಕ ಮಧುಸೂದನ ಹವಲ್ದಾರ್ ಹೇಳಿಕೆ

21032021 Gangagavati Jaganatha Dasara telefilm
Published on

ಗಂಗಾವತಿ: ಜಗನ್ನಾಥದಾಸರ ಜೀವನ ಚರಿತ್ರೆ ಆಧಾರಿತ ಚಲನಚಿತ್ರದಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗುತ್ತಿದೆ. ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಲಾಭ ನಷ್ಟದ ಲೆಕ್ಕಚಾರ ಹಾಕಿಲ್ಲ ಎಂದು ಶ್ರೀ ಜಗನ್ನಾಥ ದಾಸರ ಚಲನಚಿತ್ರದ ನಿರ್ದೇಶಕ ಮಧುಸೂದನ ಹವಾಲ್ದಾರ್ ಹೇಳಿದರು.

ನಗರದ ದುರ್ಗಮ್ಮ ದೇವಸ್ಥಾನದ ಸಮುದಾಯ ಭವನದಲ್ಲಿ ಕಲಾವಿದರ ಆಯ್ಕೆಗಾಗಿ ಭಾನುವಾರ ಆಯೋಜಿಸಲಾಗಿದ್ದ ಆಡಿಷನ್‌ನಲ್ಲಿ ಮಾತನಾಡಿದರು. ಸಮಾಜದ ಪರಿವರ್ತನೆಗೆ ದಾಸ ಶ್ರೇಷ್ಠರ ಕೊಡುಗೆ ಅಪಾರವಾಗಿದೆ. 1.50ಕೋಟಿ ರೂ.ವೆಚ್ಚದಲ್ಲಿ ಶ್ರೀ ಜಗನ್ನಾಥ ದಾಸರ ಚಿತ್ರ ನಿರ್ಮಿಸಲಾಗುತ್ತಿದೆ. ಶೇ.45 ಚಿತ್ರೀಕರಣ ಪೂರ್ಣಗೊಂಡಿದ್ದು, ಕಲ್ಯಾಣ ಕರ್ನಾಟಕ ಭಾಗದಲ್ಲೇ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ವಾಸ್ತವಿಕತೆಗೆ ಒತ್ತು ನೀಡಲಾಗಿದೆ. ಜಗನ್ನಾಥದಾಸರ ಜೀವನ ಚರಿತ್ರೆ ಧಾರವಾಹಿ ರೂಪದಲ್ಲೂ ಪ್ರಸಾರಗೊಳ್ಳಲಿದೆ ಎಂದರು.

ಕನಕಗಿರಿ, ಮೆಣೇಧಾಳ್, ಕಂಪ್ಲಿ, ಗಂಗಾವತಿ, ಆನೆಗೊಂದಿ, ತುಂಗಾಭದ್ರಾ ನದಿ ತೀರದಲ್ಲಿ ಚಿತ್ರದ ಚಿತ್ರೀಕರಣಕ್ಕೆ ನಡೆಯಲಿದೆ. ಸಾಹಿತಿ ಜೆ.ಎಂ.ಪ್ರಹ್ಲಾದ್ ಚಿತ್ರಕತೆ ಮತ್ತು ಸಂಭಾಷಣೆ ಬರೆದಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲ ದಾಸಶ್ರೇಷ್ಠರ ಜೀವನ ಆಧಾರಿತ ಚಿತ್ರಗಳನ್ನು ತೆರೆಗೆ ತರಲಾಗುವುದು ಎಂದು ಮಧುಸೂದನ ಹವಾಲ್ದಾರ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net