

ಗಂಗಾವತಿ: ಕಾರ್ಮಿಕರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅಗತ್ಯ ಸೌಲಭ್ಯ ಪಡೆಯುವಂತೆ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಹೇಳಿದರು.
ತಾಲೂಕಿನ ಶ್ರೀರಾಮನಗರದ ಉನ್ನತೀಕರಿಸಿದ ಸ.ಪ್ರಾ.ಶಾಲೆ ಆವರಣದಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಸೇವಾ ಸಂಘ ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕರ ಕ್ಷೇಮಕ್ಕಾಗಿ ಇರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಬೇಕಿದ್ದು, ಇಲಾಖೆಯಲ್ಲಿ ನೋಂದಾಯಿಸಬೇಕು. ಆರೋಗ್ಯ, ಶೈಕ್ಷಣಿಕ ಪೂರಕ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಕಾರ್ಮಿಕ ಇಲಾಖೆಯಡಿ ಆರೋಗ್ಯ ವಿಮೆ, ಮದುವೆ, ಪಿಂಚಣಿ, ಮಕ್ಕಳ ಶಿಕ್ಷಣ, ಮನೆ ನಿರ್ಮಾಣಕ್ಕೆ ಸಹಾಯಧನ ಯೋಜನೆಗಳಿದ್ದು, ಅಧಿಕಾರಿಗಳು ಕಾರ್ಮಿಕರಿಗೆ ನೆರವಾಗುವಂತೆ ಸಲಹೆ ನೀಡಿದರು.
ತಾಪಂ ಮಾಜಿ ಅಧ್ಯಕ್ಷ ಮಹ್ಮದ್ ರಫಿ ಮಾತನಾಡಿ, ಕಾರ್ಮಿಕರ ಸರ್ವತೋಮುಖ ಅಭಿವೃದ್ಧಿಗೆ ಸಂಘಟನೆಗಳು ಕಾರ್ಯನಿರ್ವಹಿಸಬೇಕಿದ್ದು, ಬೇಡಿಕೆ ಈಡೇರಿಕೆಗೆ ವೇದಿಕೆಯಾಗಬೇಕೆಂದರು.
ಗ್ರಾಪಂ ಅಧ್ಯಕ್ಷ ಶಾಂತಪ್ಪ, ಸದಸ್ಯರಾದ ಪಿ.ರಾಮಕಷ್ಣ, ಮೆಹಬೂಬ್, ಹನುಮಂತಪ್ಪ ಭೋವಿ, ಪಿಲ್ಲಿ ರಾಮಕೃಷ್ಣ, ಶ್ರೀನಿವಾಸ್, ರಾಮರಾವ್ ಬಾಲಾಜಿ, ಎಎಸೈ ಮಂಜುನಾಥ್ ಹುಲ್ಲೂರು, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮೌನೇಶ ದಢೇಸುಗೂರು, ಮುಖಂಡರಾದ ಮನ್ನೆ ಕೃಷ್ಣಮೂರ್ತಿ, ಸಂಘದ ಅಧ್ಯಕ್ಷ ಯಲ್ಲಪ್ಪ, ಪದಾಧಿಕಾರಿಗಳಾದ ಜಿ.ತಾಯಪ್ಪ, ಸೈುಲ್ಲಾ, ವರದರಾಜು, ಎ.ಕಷ್ಣ, ಎಂ. ಈಶ್ವರ, ಬಿ.ಮಾರುತಿ, ನೀಲಕಂಠ, ದುರ್ಗೇಶ, ದೌಲಾಸಾಬ್, ವಿರೂಪಾಕ್ಷಿ, ವಿ.ಪರಶುರಾಂ, ಡಿ.ಸುರೇಶ್, ಎಸ್. ವೆಂಕಟೇಶ, ಎಚ್.ನಾಗರಾಜ, ದುರ್ಗೋಜಿರಾವ್, ಮಹೇಶ್ ಇತರರಿದ್ದರು.