ಕಾರ್ಮಿಕ ಸಹಕಾರ ಸೊಸೈಟಿ ರಚನೆ ಅಗತ್ಯ

Outsourced Employees Meeting
ಗಂಗಾವತಿ ಬಾಲಕರ ಮೆಟ್ರಿಕ್ ಪೂರ್ವ ಹಾಸ್ಟೆಲ್‌ನಲ್ಲಿ ಹೊರಗುತ್ತಿಗೆ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಭೆಯಲ್ಲಿ ಜಿಲ್ಲಾಧ್ಯಕ್ಷ ಗ್ಯಾನೇಶಕ ಕಡಗದ್ ಸೋಮವಾರ ಮಾತನಾಡಿದರು. ಸಂಘದ ಪದಾಧಿಕಾರಿಗಳಾದ ಮಹ್ಮದ್ ರಫಿಕ್, ದಾವಲಸಾಬ್, ಕೀರಪ್ಪ, ನೂರ್‌ಪಾಷಾ, ಮಂಜುನಾಥ್ ಜೋಶಿ, ಶಾಂತಮ್ಮ ಇತರರಿದ್ದರು.
Published on

ಗಂಗಾವತಿ: ರಾಜ್ಯ ಸರ್ಕಾರ ಸೂಚನೆಯಂತೆ ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಜಾರಿಯಾಗಬೇಕಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುವಂತೆ ಸರ್ಕಾರಿ ಹಾಸ್ಟೆಲ್‌ಗಳ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ್ ಹೇಳಿದರು.

ನಗರದ ಬಾಲಕರ ಮೆಟ್ರಿಕ್ ಪೂರ್ವ ಹಾಸ್ಟೆಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಾಸ್ಟೆಲ್ ಹೊರಗುತ್ತಿಗೆ ನೌಕರರ ಸಭೆಯಲ್ಲಿ ಮಾತನಾಡಿದರು.

ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಕ್ರೈಸ್ ಶಾಲೆಗಳಲ್ಲಿ ದುಡಿಯುತ್ತಿರುವ ನೌಕರಿಗೆ ಕನಿಷ್ಠ ವೇತನ ಜಾರಿಗೆ ಸರ್ಕಾರ ಒಪ್ಪಿಕೊಂಡಿದ್ದು, ಜಿಲ್ಲೆಯಲ್ಲಿ ಸಮರ್ಪಕ ಅನುಷ್ಠಾನವಾಗುತ್ತಿಲ್ಲ. ಕಾರ್ಮಿಕ ಇಲಾಖೆ ಅಧಿಸೂಚನೆಯಂತೆ ಕನಿಷ್ಠ ವೇತನ ಜಾರಿಯಾಗಬೇಕಿದೆ. ಆಕ್ಷೇಪಣೆಗಾಗಿ ನೀಡಿದ್ದ 2 ತಿಂಗಳ ಕಾಲಾವಕಾಶ ಪೂರ್ಣಗೊಂಡಿದೆ. ಹಲವು ವರ್ಷಗಳಿಂದ ದುಡಿಯುತ್ತಿರುವ ನೌಕರಿಗೆ ಏಜೆನ್ಸಿಗಳಿಂದ ಮುಕ್ತಿ ದೊರೆಯಬೇಕಿದೆ. ಜೀವನ ಭದ್ರತೆ ಒದಗಿಸುವುದರ ಜತೆಗೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕಾರ್ಮಿಕ ಸಹಕಾರ ಸೊಸೈಟಿ ರಚಿಸುವ ಅಗತ್ಯವಿದೆ ಎಂದರು.

ಸಭೆಯಲ್ಲಿ ಪಿಎ್, ಇಪಿಎ್, ವೇತನ ವಿತರಣೆ, ಹೆರಿಗೆ, ವಾರದ ರಜೆ, ಇಲಾಖೆಗಳಿಂದ ದೊರೆಯಬೇಕಾದ ಇತರ ಸೌಲಭ್ಯಗಳ ಕುರಿತು ಚರ್ಚಿಸಲಾಯಿತು. ಇವುಗಳ ಅನುಷ್ಠಾನದಲ್ಲಿ ಲೋಪ ಕಂಡುಬಂದಲ್ಲಿ ಹೋರಾಟ ನಡೆಸುವ ನಿರ್ಣಯ ಕೈಗೊಳ್ಳಲಾಯಿತು.

ಸಂಘದ ಪದಾಧಿಕಾರಿಗಳಾದ ಮಹ್ಮದ್ ರಫಿಕ್, ದಾವಲಸಾಬ್, ಕೀರಪ್ಪ, ನೂರ್‌ಪಾಷಾ, ಮಂಜುನಾಥ್ ಜೋಶಿ, ಶಾಂತಮ್ಮ, ವಲೀಸಾಬ್, ರಾಮಣ್ಣ, ರೇಖಾ, ಶಿವಕುಮಾರ್, ಸೋಮನಾಥ, ಆನಂದ, ಪಾರ್ವತಿ, ರಾಧಾ, ಮಂಜಮ್ಮ, ಅಡುಗೆಯವರು, ಸಹಾಯಕರು, ಕಂಪ್ಯೂಟರ್ ಆಪರೇಟರ್, ಕಾವಲುಗಾರರ ಸೇರಿ ಇತರ ನೌಕರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net