ಸಹಿ ಸಂಗ್ರಹ ಅಭಿಯಾನ; ಹೆಚ್ಚುವರಿ ಕೆಲಸ ನಿರ್ಬಂಧಕ್ಕೆ ಆಗ್ರಹ

11122021 Gangavathi anganavadi works signature collection campaign,
Published on


ಗಂಗಾವತಿ: ಅಂಗನವಾಡಿ ಕಾರ್ಯಕರ್ತೆಯರಿಗೆ ಹೆಚ್ಚುವರಿ ಕೆಲಸ ನಿರ್ಬಂಧಿಸಿ ಅಂಗನವಾಡಿ ನೌಕರರ ಸಂಘದ ತಾಲೂಕು ಘಟಕದ ಸದಸ್ಯರು ನಗರದ 29ನೇ ವಾರ್ಡ್ ಹಿರೇಜಂತಕಲ್‌ನಲ್ಲಿ ಸಹಿ ಸಂಗ್ರಹ ಚಳವಳಿಗೆ ಶುಕ್ರವಾರ ಚಾಲನೆ ನೀಡಿದರು. ಮಕ್ಕಳ ಆಹಾರ, ಆರೋಗ್ಯ ಮತ್ತು ಶಿಕ್ಷಣದ ಉಳಿವು ಪರಿಕಲ್ಪನೆಯಡಿ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಜನರಿಂದ ಸಹಿ ಸಂಗ್ರಹಿಸಿದರು.

ತಾಲೂಕು ಘಟಕದ ಅಧ್ಯಕ್ಷೆ ಸಾವಿತ್ರಿ ಜೋಶಿ ಮಾತನಾಡಿ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೂರ್ವ ಪ್ರಾಥಮಿಕ ಶಿಕ್ಷಣ ನೀಡುತ್ತಿದ್ದು, ಸರ್ಕಾರದ ವಿವಿಧ ಯೋಜನೆಗಳ ಕರ್ತವ್ಯದಿಂದ ಸಮರ್ಪಕ ಕಾರ್ಯನಿರ್ವಹಿಸಲಾಗುತ್ತಿಲ್ಲ. 3 ರಿಂದ 6ವರ್ಷದವರೆಗಿನ ಮಕ್ಕಳ ಶಿಕ್ಷಣ ಅಂಗನವಾಡಿ ಕೇಂದ್ರದಲ್ಲಿ ಮುಂದುವರಿಯಬೇಕಿದೆ. ಹೆಚ್ಚುವರಿ ಕಾರ್ಯ ನಿರ್ಬಂಧಿಸಿದರೆ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಅವಕಾಶ ದೊರೆಯಲಿದೆ ಎಂದರು. ಪ್ರಧಾನ ಕಾರ್ಯದರ್ಶಿ ದುರುಗಮ್ಮ ಹೊಸ್ಕೇರಾ, ಖಜಾಂಚಿ ಮಹಾಂತಮ್ಮ, ಪದಾಧಿಕಾರಿಗಳಾದ ಗಿರಿಜಾ, ಶರಣಮ್ಮ, ಸಕ್ಕುಬಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net