

ಗಂಗಾವತಿ: ನಗರದ ಜೆಎಂಎ್ಸಿ ಸಂಕೀರ್ಣದ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ವಿಮರ್ಷಣಾ ಮಂಡಳಿ ಪ್ರಥಮ ಸಭೆ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಸಭೆಯಲ್ಲಿ ಮಂಡಳಿಯ ಅಧಿಕಾರ ಮತ್ತು ಕಾರ್ಯನಿರ್ವಹಣೆ ಕುರಿತು ಚರ್ಚಿಸಲಾಯಿತು. ಮಾನಸಿಕ ಅಸ್ವಸ್ಥ ವ್ಯಕ್ತಿಗಳ ಹಕ್ಕುಗಳು, ಮಂಡಳಿಯಿಂದಾಗುವ ಕಾರ್ಯಗಳು, ಮಾನಸಿಕ ಆರೋಗ್ಯ ಕಾರ್ಯಕ್ರಮ ಮತ್ತು ಆಶಾ ಕಾರ್ಯಕರ್ತರ ಮೂಲಕ ಹಕ್ಕುಗಳ ಬಗ್ಗೆ ಮಾಹಿತಿ ಸಂಗ್ರಹಿಸುವ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲಾಯಿತು. ಜಿಲ್ಲೆಯ ಮಾನಸಿಕ ಅಸ್ವಸ್ಥರನ್ನು ಗುರುತಿಸಿ, ಸೂಕ್ತ ಚಿಕಿತ್ಸೆ ನೀಡುವ ಬಗ್ಗೆ ಸೂಚಿಸಲಾಯಿತು.
ಸಭೆಯನ್ನುದ್ದೇಶಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ ಮಾತನಾಡಿದರು. ಜಿಲ್ಲಾ ಆರೋಗ್ಯ ವಿಮರ್ಷಣ ಮಂಡಳಿ ಅಧ್ಯಕ್ಷ ಮಹಾಂತೇಶ ಎಸ್.ದರ್ಗದ್, ಕೊಪ್ಪಳ ಚುನಾವಣೆ ತಹಸೀಲ್ದಾರ್ ರವಿಕುಮಾರ ವಸದ್, ಕಿಮ್ಸ್ ಮನೋತಜ್ಞ ಡಾ.ರವಿಕುಮಾರ, ವೈದ್ಯಾಧಿಕಾರಿ ಡಾ.ಶಫೀವುಲ್ಲಾ ಆ.ಮುಲ್ಲಾ, ಪ್ರತಿನಿಧಿಗಳಾದ ಬಿ.ಹಂಪಣ್ಣ, ರೇಣುಕಮ್ಮ ಇದ್ದರು.