

ಗಂಗಾವತಿ: ತಾಲೂಕಿನ ಹಣವಾಳದ ಶ್ರೀದುರ್ಗಾ ಪರಮೇಶ್ವರಿ ದೇವಾಲಯ ಆವರಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್‌ನ ಹೇರೂರು ವಲಯ ಸರಸ್ವತಿ ಜ್ಞಾನ ವಿಕಾಸ ಕೇಂದ್ರದ ಸುರಕ್ಷಾ ಕಾರ್ಯಕ್ರಮದಡಿ ಆರೋಗ್ಯ ತಪಾಸಣೆ ಉಚಿತ ಶಿಬಿರ ಗುರುವಾರ ಹಮ್ಮಿಕೊಳ್ಳಲಾಗಿತ್ತು.
ಟ್ರಸ್ಟ್ ಜಿಲ್ಲಾ ಯೋಜನಾ ನಿರ್ದೇಶಕ ಪ್ರಕಾಶರಾವ್ ಮಾತನಾಡಿ, ಸ್ವಸ್ಥ ಆರೋಗ್ಯಕ್ಕಾಗಿ ಟ್ರಸ್ಟ್‌ನಿಂದ ಆರೋಗ್ಯ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಸ್ವಾವಲಂಬನೆ, ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಜತೆಗೆ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದೆ ಎಂದರು.
ರಾಜ್ಯ ರೈತ ಕೃಷಿ ಸಂಘದ ಗೌರವಾಧ್ಯಕ್ಷ ಈರಣ್ಣ ಕುರಿ, ದೇವಾಲಯ ಸಮಿತಿ ಸದಸ್ಯ ಉಡಚನಗೌಡ, ಟ್ರಸ್ಟ್‌ನ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸುಧಾ, ವಲಯ ಮೇಲ್ವಿಚಾರಕ ಎಸ್.ಬಿ. ವಿಠ್ಠಲ, ತಜ್ಞ ವೈದ್ಯರಾದ ಡಾ. ಶ್ವೇತಾ ಹೊಸಳ್ಳಿ, ಡಾ.ನಾಗರಾಜ್ ಲೋಕರೆ, ಡಾ.ಶಿರಿಷಾ ಲೋಕರೆ, ಮುಖಂಡ ಶಿವಕುಮಾರ, ಸೇವಾ ಪ್ರತಿನಿಧಿ ನೀಲವತಿ ಇತರರಿದ್ದರು.