ರಕ್ತದಾನಕ್ಕೆ ವಿದ್ಯಾರ್ಥಿಗಳು ಮುಂದಾಗಲಿ

blood donation camp
ಗಂಗಾವತಿಯ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಪ್ರಾಚಾರ್ಯೆ ಡಾ.ಮುಮ್ತಾಜ್ ಬೇಗಂ ಗುರುವಾರ ಉದ್ಘಾಟಿಸಿದರು. ಎನ್ನೆಸ್ಸೆಸ್ ಸಂಯೋಜಕ ಬಿ.ಣಿರಾಜ, ಜಿಲ್ಲಾ ರೆಡ್‌ಕ್ರಾಸ್ ಯೂನಿಟ್ ಪ್ರತಿನಿಧಿ ದೇವೇಂದ್ರಪ್ಪ ಹಿಟ್ನಾಳ್ ಇತರರಿದ್ದರು.
Published on

ಗಂಗಾವತಿ: ರಕ್ತದಾನದಿಂದ ಆರೋಗ್ಯ ವೃದ್ಧಿಸಲಿದ್ದು, ಸ್ವಯಂಪ್ರೇರಿತ ರಕ್ತದಾನ ಶಿಬಿರಕ್ಕೆ ವಿದ್ಯಾರ್ಥಿಗಳು ನಿರಂತರ ಸ್ಪಂದಿಸಬೇಕಿದೆ ಎಂದು ಎಸ್‌ಕೆಎನ್‌ಜಿ ಪವಿ ಕಾಲೇಜಿನ ಪ್ರಾಚಾರ್ಯೆ ಡಾ.ಮುಮ್ತಾಜ್ ಬೇಗಂ ಹೇಳಿದರು.

ನಗರದ ಎಸ್‌ಕೆಎನ್‌ಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಭಾರತೀಯ ರೆಡ್‌ಕ್ರಾಸ್ ಯೂನಿಟ್, ಎನ್ನೆಸ್ಸೆಸ್ ಘಟಕ ಮತ್ತು ಯುವ ರೆಡ್ ಕ್ರಾಸ್ ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ರಕ್ತದಾನ ಮಹಾದಾನವಾಗಿದ್ದು, ಜೀವನ್ಮರಣದಲ್ಲಿ ಹೋರಾಡುತ್ತಿರುವವರಿಗೆ ಸಂಜೀವಿನಿ. ರಕ್ತದಾನದಿಂದ ಒಂದು ಜೀವ ಉಳಿಸಬಹುದು ಎಂದರು.

ಎನ್ನೆಸ್ಸೆಸ್ ಸಂಯೋಜಕ ಬಿ.ಣಿರಾಜ ಮಾತನಾಡಿ, ರಾಜ್ಯದಾದ್ಯಂತ 1.5ಲಕ್ಷ ಯೂನಿಟ್ ರಕ್ತ ಸಂಗ್ರಹ ಗುರಿಯಿದ್ದು, ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಜಿಲ್ಲಾ ರೆಡ್‌ಕ್ರಾಸ್ ಯೂನಿಟ್ ಪ್ರತಿನಿಧಿ ದೇವೇಂದ್ರಪ್ಪ ಹಿಟ್ನಾಳ್, ಐಕ್ಯೂಎಸಿ ಸಂಯೋಜಕರಾದ ಡಾ. ಶಿವರಾಜ್ ಗುರಿಕಾರ, ಪ್ರೊ.ಜಗದೇವಿ ಕಲಶಟ್ಟಿ, ಅಣ್ಣೋಜಿ ರೆಡ್ಡಿ, ಯುವ ರೆಡ್‌ಕ್ರಾಸ್ ಘಟಕ ಸಂಯೋಜಕ ಅಕ್ಕಿ ಮಾರುತಿ, ಸಹಾಯಕ ಪ್ರಾಧ್ಯಾಪಕರಾದ ದೊರೆಬಾಬು, ಡಾ.ಬಸವರಾಜ ಗೌಡನಬಾವಿ, ಡಾ.ಮುದಕನಗೌಡ, ರಾಘವೇಂದ್ರ ಚೌಡಕಿ, ದೊಡ್ಡಬಸಮ್ಮ, ಸೋಮಶೇಖರ್, ಪಂಚಾಕ್ಷರಸ್ವಾಮಿ ಇತರರಿದ್ದರು. ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳಿಂದ 42 ಯೂನಿಟ್ ರಕ್ತ ಸಂಗ್ರಹಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net