

ಗಂಗಾವತಿ: ಶಿವಯೋಗಿ ಹಾನಗಲ್ ಕುಮಾರೇಶ್ವರ ಜಯಂತ್ಯುತ್ಸವ ಆಚರಿಸಲಾಗುತ್ತಿದ್ದು, ಹಬ್ಬದ ವಾತಾವರಣ ನಿರ್ಮಿಸೋಣ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ನಗರದ ಶ್ರೀ ಚನ್ನಮಲ್ಲಿಕಾರ್ಜುನ ಪುರಾಣ ಮಂಟಪದಲ್ಲಿ ಜಯಂತ್ಯುತ್ಸವ ಸಮಿತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಶಿವಯೋಗಿಗಳ ಆದರ್ಶ ಮತ್ತು ತತ್ವಗಳನ್ನು ಜನತೆಗೆ ತಿಳಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕಿದ್ದು, ಅದ್ದೂರಿ ಮತ್ತು ಆರ್ಥಪೂರ್ಣ ಆಚರಣೆಗೆ ಒತ್ತು ನೀಡಬೇಕು. ಇದರ ಯಶಸ್ಸಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಹಾನಗಲ್ ಕುಮಾರೇಶ್ವರ 158ನೇ ಜಯಂತಿ ಅಖಿಲ ಭಾರತ ವೀರಶೈವ ಮಹಾಸಭಾ ನೇತೃತ್ವದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಇದರ ಯಶಸ್ಸಿಗೆ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ ಎಂದರು. ಸಭೆಯಲ್ಲಿ ಕಾರ್ಯಕ್ರಮದ ರೂಪರೇಷೆ, ದಿನಾಂಕ ನಿಗದಿ, ಮೆರವಣಿಗೆ ಮತ್ತು ವೇದಿಕೆ ಕಾರ್ಯಕ್ರಮ ಕುರಿತು ಚರ್ಚಿಸಲಾಯಿತು.
ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಸಿಂಗನಾಳ ವಿರೂಪಾಕ್ಷಪ್ಪ, ಕಾಡಾ ಮಾಜಿ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ಜಿಪಂ ಮಾಜಿ ಸದಸ್ಯ ಎಚ್.ಎಂ.ಸಿದ್ರಾಮಯ್ಯಸ್ವಾಮಿ, ಮಹಾಸಭಾ ಜಿಲ್ಲಾಧ್ಯಕ್ಷ ಕಳಕನಗೌಡ ಜಮಾಪುರ, ತಾಲೂಕಾಧ್ಯಕ್ಷ ಎಚ್.ಎಸ್. ಗಿರೇಗೌಡ, ಮಾಜಿ ಅಧ್ಯಕ್ಷ ಅಶೋಕಸ್ವಾಮಿ ಹೇರೂರು, ಪದಾಧಿಕಾರಿಗಳಾದ ನಂದಿನಿ ಮುದ್ಗಲ್, ಜೆ ನಾಗರಾಜ್, ಕೆ.ಚನ್ನಬಸಯ್ಯಸ್ವಾಮಿ, ಗಾಳಿ ರುದ್ರಪ್ಪ ಮನೋಹರಸ್ವಾಮಿ ಹಿರೇಮಠ, ಮನೋಹರಗೌಡ ಹೇರೂರ, ಶ್ರೀಶೈಲ ಪಟ್ಟಣಶೆಟ್ಟಿ , ಮಳಗಿ ಚನ್ನಪ್ಪ, ಸಂಧ್ಯಾ ಹೇರೂರ, ಶಶಿಧರಗೌಡ ಮಾಲಿಪಾಟೀಲ್, ಅಯ್ಯನಗೌಡ ಹೇರೂರ, ಎಚ್.ಎಂ.ಶೈಲಜಾ ಇತರರಿದ್ದರು.