ಹಡಪದ ಅಪ್ಪಣ್ಣ ಸಮಾಜದ ತಾಲೂಕಾಧ್ಯಕ್ಷ ನಿರುಪಾದಿ ಕೇಸರಹಟ್ಟಿ

SANMANA
ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಉಳ್ಳಿಡಗ್ಗಿಯ ಹಡಪದ ಅಪ್ಪಣ್ಣ ಸಮಾಜದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಸರಿಗಮ ಮತ್ತು ತಾಲೂಕಾಧ್ಯಕ್ಷ ನಿರುಪಾದಿ ಕೇಸರಹಟ್ಟಿ ಅವರನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಭೀಮನಗೌಡ, ಪ್ರಧಾನ ಕಾರ್ಯದರ್ಶಿ ಶಿವಣ್ಣ ನೀಲಕಮಲ್, ಮುಖಂಡ ಬಸವರಾಜ ಬುನ್ನಟ್ಟಿ ಇತರರಿದ್ದರು.
Published on

ಗಂಗಾವತಿ: ತಾಲೂಕಿನ ವಡ್ಡರಹಟ್ಟಿ ಉಳ್ಳಿಡಗ್ಗಿಯ ಹಡಪದ ಅಪ್ಪಣ್ಣ ಸಮಾಜದ ಕಚೇರಿಯಲ್ಲಿ ಸಮಾಜದ ತಾಲೂಕು ಘಟಕದ ಪದಾಧಿಕಾರಿಗಳನ್ನು ಮಂಗಳವಾರ ಆಯ್ಕೆ ಮಾಡಲಾಯಿತು.

ಸಮಾಜದ ಜಿಲ್ಲಾಧ್ಯಕ್ಷ ಹನುಮಂತಪ್ಪ ಸರಿಗಮ ನೇತೃತ್ವದಲ್ಲಿ ನಡೆದ ಸಮಾಜದ ಸಭೆಯಲ್ಲಿ ಸಂಘಟನೆ, ಪದಾಧಿಕಾರಿಗಳ ಆಯ್ಕೆ ಮತ್ತು ಸದಸ್ಯರ ಕರ್ತವ್ಯದ ಬಗ್ಗೆ ಮಾಹಿತಿ ನೀಡಲಾಯಿತು.

ತಾಲೂಕು ಘಟಕದ ಪದಾಧಿಕಾರಿಗಳು: ನಿರುಪಾದಿ ಕೇಸರಹಟ್ಟಿ (ಅಧ್ಯಕ್ಷ), ಭೀಮನಗೌಡ (ಉಪಾಧ್ಯಕ್ಷ), ಶಿವಣ್ಣ ನೀಲಕಮಲ್ (ಪ್ರಧಾನ ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಹನುಮಂತಪ್ಪ ಸರಿಗಮ ಮತ್ತು ತಾಲೂಕಾಧ್ಯಕ್ಷ ನಿರುಪಾದಿ ಕೇಸರಹಟ್ಟಿ ಅವರನ್ನು ಸಮಾಜದ ತಾಲೂಕು ಘಟಕದಿಂದ ಸನ್ಮಾನಿಸಲಾಯಿತು.

ಸಮಾಜದ ಮುಖಂಡರಾದ ಶರಣಪ್ಪ ಬಂಗಾರದಂಗಡಿ, ಶರಣಪ್ಪ ಡಿಸ್ಕೋ, ಬಸವರಾಜ್, ವೀರಭದ್ರಪ್ಪ ಅಮಾತೆಪ್ಪ, ಪಂಪಾಪತಿ ಹೊಸಳ್ಳಿ, ಮಂಜುನಾಥ ಸೋಮಸಾಗರ, ನಾಗರಾಜ್ ಬೊಮ್ಮನಾಳ, ಬಸವರಾಜ ಬುನ್ನಟ್ಟಿ, ಕಳಕಪ್ಪ, ರಮೇಶ ಮಹೆಬೂಬ್‌ನಗರ, ವಿರೇಶ ಸರಿಗಮ ಮತ್ತು ಗವಿಸಿದ್ದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net