

ಗಂಗಾವತಿ: ಕೆಆರ್‌ಐಡಿಎಲ್ ಸಂಸ್ಥೆಯಲ್ಲಾಗಿರುವ ಅನುದಾನ ದುರ್ಬಳಕೆ ಪ್ರಕರಣವನ್ನು ಸಿಬಿಐ ತನಿಖೆಗೊಳಪಡಿಸುವಂತೆ ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಸೇನೆ ಸದಸ್ಯರು ತಾಲೂಕಾಡಳಿತ ಸೌಧದ ಮುಂದೆ ದಾಖಲೆಗಳೊಂದಿಗೆ ಮಂಗಳವಾರ ಪ್ರತಿಭಟನೆ ನಡೆಸಿ ಶಿರಸ್ತೇದಾರ್ ಸುನೀಲ್ ಕುಲ್ಕರ್ಣಿಗೆ ಮನವಿ ಸಲ್ಲಿಸಿದರು.
ಸಾಮಾಜಿಕ ಹೋರಾಟಗಾರರ ಪ್ರತಿನಿಧಿ ಬಿ.ಲಕ್ಷ್ಮೀಪತಿ ಮಾತನಾಡಿ, ಕೆಆರ್‌ಐಡಿಎಲ್ ಸಂಸ್ಥೆಯಿಂದ ಕೊಪ್ಪಳದಲ್ಲಿ 2ಸಾವಿರ ಕೋಟಿ ರೂ.ಅನುದಾನ ದುರ್ಬಳಕೆಯಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾದರೂ ತನಿಖೆ ಸಮರ್ಪಕವಾಗುತ್ತಿಲ್ಲ. ಸಂಸ್ಥೆಯ ಸಾಮಾನ್ಯ ನೌಕರರ ಬಹುಕೋಟಿ ಹಗರಣದಲ್ಲಿ ಸಿಲುಕಿರುವ ಬಗ್ಗೆ ಸಾಬೀತಾಗಿದ್ದರೂ ತಪ್ಪಿಸ್ಥರಿಗೆ ಕ್ರಮವಾಗಿಲ್ಲ. ಸಂಸ್ಥೆಯಲ್ಲಿ ನಿಯೋಜನೆಗೊಂಡ ಇಂಜಿನಿಯರ್ ಸೇರಿ ಇತರ ಸಿಬ್ಬಂದಿ ಅನುದಾನ ದುರ್ಬಳಕೆಯಲ್ಲಿ ಶಾಮೀಲಾಗಿದ್ದು, ಸಿಬಿಐ ತನಿಖೆ ಮೂಲಕ ತಪ್ಪಿಸಸ್ಥರಿಗೆ ಸೂಕ್ತ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರು.
ವೇದಿಕೆ ಕುಷ್ಟಗಿ ತಾಲೂಕಾಧ್ಯಕ್ಷ ಮರಿಯಪ್ಪ ಹಕ್ಕಳ್, ಪದಾಧಿಕಾರಿಗಳಾದ ನಾಗರಾಜ್ ದೊಂಬರ್, ಸೋಫಿಯಾರಾಣಿ ಇತರರಿದ್ದರು.