ಪದವಿ ಪರೀಕ್ಷೆಗಳು ನಡೆಸುವುದು ಬೇಡ; ಎಐಡಿಎಸ್‌ಒ ಪ್ರತಿಭಟನೆ

23062021 Gangavati AIDSO Protest
Published on

ಗಂಗಾವತಿ: ಪದವಿಯ ಸೆಮಿಸ್ಟರ್ ಪರೀಕ್ಷೆಗಳನ್ನು ನಡೆಸಬಾರದು ಎಂದು ಒತ್ತಾಯಿಸಿ ಎಐಡಿಎಸ್‌ಒ ತಾಲೂಕು ಸಮಿತಿ ಪದಾಧಿಕಾರಿಗಳು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ತಾಲೂಕು ಸಮಿತಿ ಸಂಘಟನಾ ಸಂಚಾಲಕ ಗಂಗರಾಜು ಅಳ್ಳಳ್ಳಿ ಮಾತನಾಡಿ, ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಾಲೇಜುಗಳು ಮುಚ್ಚಿದ್ದು ಇದೀಗ ಆನ್‌ಲೈನ್ ತರಗತಿಗಳು ಶುರುವಾಗಿವೆ. ಆದರೆ ಒಂದೇ ತಿಂಗಳಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದ್ದು, ಈ ಬಗ್ಗೆ ಗೊಂದಲಕ್ಕೊಳಗಾಗಿದ್ದಾರೆ. ಸೆಮಿಸ್ಟರ್ ಪರೀಕ್ಷೆ ಕೈಬಿಟ್ಟು ಆಂತರಿಕ ಮೌಲ್ಯಮಾಪನ ಅಥವಾ ವೈಜ್ಞಾನಿಕ ಮಾನದಂಡ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಕಾರ್ಯದರ್ಶಿ ಶರಣು ಗಡ್ಡಿ, ಪದಾಧಿಕಾರಿಗಳಾದ ಆನಂದ್, ರಾಘವೇಂದ್ರ, ನಾಗರಾಜ್, ನಂದಕುಮಾರ್, ಅಭಿಷೇಕ್, ರಾಘವೇಂದ್ರ, ದೇವರಾಜ್ ಸುನೀಲ್, ಯಾಜ್, ಚನ್ನಬಸವ ಮತ್ತು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net