ವೃತ್ತಿಪರ, ಸ್ನಾತಕೋತ್ತರ ಪದವಿ ಪರೀಕ್ಷೆ ರದ್ದುಪಡಿಸಿ

24072020 Gangavathi Student Federation appeal
Published on

ಗಂಗಾವತಿ: ವೃತ್ತಿಪರ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ನಗರದ ಮಿನಿವಿಧಾನಸೌಧದ ಮುಂಭಾಗ ಕಲ್ಯಾಣ ಕರ್ನಾಟಕ (ಹೈಕ) ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಮಿತಿ ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿ ಗ್ರೇಡ್2 ತಹಸೀಲ್ದಾರ್ ಶಿವರಾಜ್‌ಗೆ ಮನವಿ ಸಲ್ಲಿಸಿದರು.

ನೇತೃತ್ವವಹಿಸಿದ್ದ ಸಮಿತಿ ಜಿಲ್ಲಾಧ್ಯಕ್ಷ ಮಾರುತಿ ಮೆತಗಲ್ ಮಾತನಾಡಿ, ಕರೊನಾ ಮುಂಜಾಗ್ರತೆ ಹಿನ್ನೆಲೆಯಲ್ಲಿ ಸಿಇಟಿ, ಇಂಜಿನಿಯರಿಂಗ್, ವೈದ್ಯಕೀಯ, ವೃತ್ತಿಪರ ಕಾನೂನು ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ ಎದುರಿಸಲು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ. ಪರೀಕ್ಷೆಗಾಗಿ ನಗರ ಪ್ರದೇಶದ ವಸತಿ ನಿಲಯ ಮತ್ತು ಪಿಜಿ ಸೆಂಟರ್‌ಗಳಲ್ಲಿರಬೇಕಿದ್ದು, ಆರೋಗ್ಯ ಭದ್ರತೆ ಕಾಡುತ್ತಿದೆ. ಜೀವ ಇದ್ದರೆ ಭವಿಷ್ಯತ್ವದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯವಿದ್ದು, ಕರೊನಾ ಭೀತಿಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಾಗುತ್ತಿಲ್ಲ. ಪ್ರಸಕ್ತ ಸಾಲಿನ ಪರೀಕ್ಷೆಗಳನ್ನು ರದ್ದುಮಾಡಿ, ಎಲ್ಲ ವಿದ್ಯಾರ್ಥಿಗಳಿಗೆ ಮುಂಬಡ್ತಿ ನೀಡುವಂತೆ ಒತ್ತಾಯಿಸಿದರು.

ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷ ನಿಂಗೇಶ ಬಿ.ನಾಯಕ, ಪ್ರಧಾನ ಕಾರ್ಯದರ್ಶಿ ಹನುಮಂತ ಸುಂಕಾಪುರ, ವಕೀಲ ಎಚ್.ಕೆ.ಹುಲುಗಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net