ಶ್ರೀರಾಮನ ಆದರ್ಶ ಎಲ್ಲ ಕಾಲದಲ್ಲೂ ಪ್ರಸ್ತುತ; ಹಾಸ್ಯ ಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ ಅನಿಸಿಕೆ

31012021 Gangavati b pranesh kavigosti
Published on

ಜಿಲ್ಲಾಮಟ್ಟದ ಕವಿಗೋಷ್ಠಿ

ಗಂಗಾವತಿ: ಶ್ರೀರಾಮನ ಆದರ್ಶ ಎಲ್ಲ ಕಾಲದಲ್ಲೂ ಪ್ರಸ್ತುತವಾಗಿದ್ದು, ಈತನ ವ್ಯಕ್ತಿತ್ವದ ಮೇಲೆ ಕನ್ನಡ ಸಾಹಿತ್ಯದಲ್ಲಿ ಹಲವು ಕೃತಿಗಳು ರಚನೆಗೊಂಡಿವೆ ಎಂದು ಹಾಸ್ಯ ಭಾಷಣಕಾರ ಗಂಗಾವತಿ ಬೀಚಿ ಬಿ.ಪ್ರಾಣೇಶ ಹೇಳಿದರು.

ತಾಲೂಕಿನ ಆನೆಗೊಂದಿ ವಾಲಿಕಿಲ್ಲಾ ಮ್ಯಾಗೋಟದ ಶ್ರೀ ಆದಿಶಕ್ತಿ ದೇವಾಲಯದ ಆವರಣದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಅಭಿಯಾನ ನಿಮಿತ್ತ ಅಖಿಲ ಭಾರತ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಭಾನುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಕವಿಗೋಷ್ಠಿಯಲ್ಲಿ ಮಾತನಾಡಿದರು.
ಪುರಾಣ, ಕಾವ್ಯಗಳ ಅಧ್ಯಯನವಾಗಬೇಕಿದ್ದು, ಸಾಹಿತ್ಯದಲ್ಲಿನ ಮಾನವೀಯತೆ ಮೌಲ್ಯ ಪ್ರಚುರಪಡಿಸುವ ಅಗತ್ಯವಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕವಿ ಡಾ.ನಾರಾಯಣ ಕಂದಗಲ್ ಮಾತನಾಡಿ, ಭಾರತದ ಕಣಕಣದಲ್ಲೂ ಶ್ರೀರಾಮನ ಪ್ರಭಾವವಿದ್ದು, ಪೂರ್ವಗ್ರಹ ಪೀಡಿತರಾಗಿ ಕಾವ್ಯ ಮತ್ತು ಪುರಾಣಗಳನ್ನು ನೋಡದಂತೆ ಸಲಹೆ ನೀಡಿದರು. ಅಯೋಧ್ಯೆಯಲ್ಲಿ ರಾಮಮಂದಿರ, ಹೃದಯದಲ್ಲಿ ರಾಮಚಂದಿರ ಕುರಿತು ಕವಿಗಳಾದ ವೆಂಕಟರಾವ್ ಕುಲ್ಕರ್ಣಿ, ಮಲ್ಲೇಶಪ್ಪ ಅಂಗಡಿ, ಕರಿಸಿದ್ದನಗೌಡ, ಮಾಲಾಶ್ರೀಧರ,ಲಕ್ಷ್ಮೀದೇವಿಪತ್ತಾರ, ಮುರಳೀಧರ ಜೋಷಿ, ಬಸವರಾಜ ಹೇರೂರು, ಸುರೇಶ ಕಲಾಪ್ರಿಯ, ಮಹಾದೇವ ಮೋಟಿ, ಯಲ್ಲಪ್ಪ ಕಲಾಲ್ ಕವನ ವಾಚಿಸಿದರು.

ಪದಾಧಿಕಾರಿಗಳಾದ ಪವನಕುಮಾರ ಗುಂಡೂರು, ಶರಣಪ್ಪ ತಳ್ಳಿ, ಶ್ರೀನಿವಾಸ ಕುಲ್ಕರ್ಣಿ, ಶರಣಪ್ಪ ತಳ್ಳಿ, ಛತ್ರಪ್ಪ ತಂಬೂರಿ, ರೋಷನ್ ಭಂಡಾರಿ, ರಾಘವೇಂದ್ರ ಮಂಗಳೂರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net