

ಗಂಗಾವತಿ: ತಾಲೂಕಿನ ಬಸಾಪಟ್ಟಣದ ಮಹೆಬೂಬ್‌ನಗರ ಶಾದಿಮಹಲ್‌ನಲ್ಲಿ ಸ್ನೇಹ ಸಿದ್ಧಿ ಸೇವಾ ಟ್ರಸ್ಟ್‌ನಿಂದ ಮಹಿಳೆಯರ ಆರೋಗ್ಯ ತಪಾಸಣೆ ಉಚಿತ ಶಿಬಿರ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ವಡ್ಡರಹಟ್ಟಿಯ ಎನ್‌ಆರ್ ಆಸ್ಪತ್ರೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಶಿಬಿರದಲ್ಲಿ ಸೀ ಆರೋಗ್ಯ ಸಮಸ್ಯೆಗಳನ್ನು ತಪಾಸಿಸಿ, ಚಿಕಿತ್ಸೆ ಮತ್ತು ಸಲಹೆ ನೀಡಿ
ಉಚಿತ ಔಷಧ ವಿತರಿಸಲಾಯಿತು.
ಬಸಾಪಟ್ಟಣ ನಂಜುಂಡೇಶ್ವರ ಮಠದ ಸಿದ್ಧರಾಮಯ್ಯ ಗುರುವಿನ್ ಮಾತನಾಡಿ, ಗ್ರಾಮೀಣ ಭಾಗದ ಜನರು ಆರೋಗ್ಯದತ್ತ ಗಮನಹರಿಸಬೇಕಿದ್ದು, ಶಿಬಿರದ
ಮೂಲಕ ಆರೋಗ್ಯ ಭಾಗ್ಯದ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಮುಖಂಡರಾದ ವಿರೂಪಾಕ್ಷಯ್ಯಸ್ವಾಮಿ ಹಿರೇಮಠ, ಕೆ.ಮಹೆಬೂಬ್‌ಸಾಬ್, ಎಸ್.ರಾಮಕೃಷ್ಣ, ಧನಂಜಯ, ಎಸ್.ಮಹೆಬೂಬ್‌ಸಾಬ್, ಟ್ರಸ್ಟ್ ಅಧ್ಯಕ್ಷ
ಮಹ್ಮದ್‌ಸಾಬ್ ದಳಪತಿ, ವೆಂಕಟಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಅಂಜುಮ್ ತಾಜ್, ವೈದ್ಯರಾದ ಮೊಹ್ಮದಿನಾಹಿದ್, ಗೌರಿ,
ಎನ್.ಆರ್.ಅಬಿದ್ ಹುಸೇನ್ ಇತರರಿದ್ದರು. ಶಿಬಿರದಲ್ಲಿ 400ಕ್ಕೂ ಹೆಚ್ಚು ಮಹಿಳೆಯರನ್ನು ತಪಾಸಿಸಲಾಯಿತು.