ಉಚಿತ ಖತ್ನಾ ಶಿಬಿರ ಉದ್ಘಾಟನೆ

free circumcision camp
ಗಂಗಾವತಿ 10ನೇ ವಾರ್ಡ್ ಶರಣಬಸವೇಶ್ವರ ನಗರದಲ್ಲಿ ಗೌಸ್ ಓ ರಜಾ ಪಂಚ್ ಕಮಿಟಿಯಿಂದ ಮೊದಲ ವರ್ಷದ ಉಚಿತ ಖತ್ನಾ ಶಿಬಿರ ನಡೆಯಿತು. ಮುಖಂಡರಾದ ವಲೀಸಾಬ, ಮಹೆಬೂಬು ಸದ್ದಾಂ ಹುಸೇನ್, ಯಮನೂರು, ಭಾಷಾ ಮನಿಯಾರ್, ಇಮಾಮ್‌ಸಾಬ ಇತರರಿದ್ದರು.
Published on

ಗಂಗಾವತಿ: ನಗರದ 10ನೇ ವಾರ್ಡ್ ಶರಣಬಸವೇಶ್ವರ ನಗರದಲ್ಲಿ ಗೌಸ್ ಓ ರಜಾ ಪಂಚ್ ಕಮಿಟಿಯಿಂದ ಮೊದಲ ವರ್ಷದ ಉಚಿತ ಖತ್ನಾ ಶಿಬಿರ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.

ಧಾರ್ಮಿಕ ವಿಧಿವಿಧಾನದೊಂದಿಗೆ ಶಿಬಿರ ಹಮ್ಮಿಕೊಂಡಿದ್ದು, ತಜ್ಞ ವೈದ್ಯರ ನೇತೃತ್ವದಲ್ಲಿ ಧರ್ಮ ಬೋಧನೆ ಮೂಲಕ ನೆರವೇರಿಸಲಾಯಿತು. 20ಕ್ಕೂ ಹೆಚ್ಚು ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಮಕ್ಕಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸಲಾಯಿತು. ಖತ್ನಾ ಶಿಬಿರದ ಉದ್ದೇಶ, ಧಾರ್ಮಿಕ, ವೈಜ್ಞಾನಿಕ ಹಿನ್ನೆಲೆ ಮತ್ತು ಪಂಚಕಮಿಟಿ ಸಮಾಜ ಚಟುವಟಿಕೆಗಳ ಕುರಿತು ಸದಸ್ಯ ಎಚ್.ಎಸ್.ಮುಧೋಳ ಮಾತನಾಡಿದರು.

ನಗರಸಭೆ ಸದಸ್ಯೆ ಪಾರ್ವತೆಮ್ಮ ದುರುಗೇಶ ದೊಡ್ಮನಿ, ಬಾಬುಸಾಬ, ಶಾಬುದ್ದೀನ್ ಗುಜರಿ, ಖಾಜಾಸಾಬ ಗುಂಡಮ್ಮಕ್ಯಾಂಪ್, ಶೇಖಸಾಬ ಮೈಲಾಪುರ, ಹುಸೇನ್ ಪೀರ, ಹುಸೇನಭಾಷಾ ಕನಕಗಿರಿ, ರಜಾವಲಿ ಹಜರತ್, ಇಬ್ರಾಹಿಂ,ಮರ್ದಾನ್, ಸುಭಾನಿ, ರಾಜಾ, ಹೊನ್ನೂರ್ ಕನಕಗಿರಿ, ರಾಜಾವಲಿ, ವಲಿಸಾಬ ಮುಖಂಡರಾದ ಹತ್ತಿಮರದ ರಮೇಶ್,ಹನುಮಸಿಂಗ್,ಪೀಟರ್ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net